ಮುಳಬಾಗಿಲು: ಹಳೆ ಮನೆಯ ಚಾವಣಿ ಕುಸಿದು ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬುಧವಾರ ಮುಂಜಾನೆ ಮುಳಬಾಗಿಲು ನಗರದಲ್ಲಿ ನಡೆದಿದೆ.

ಮಾಹೆ ನೂರ್ (14) ಮೃತ ಬಾಲಕಿ. ಮುಳಬಾಗಿಲು ನಗರದ ಜಹಂಗೀರ್ ಮೊಹಲ್ಲಾದ ಸುಹೇಲ್ ಎಂಬ ವ್ಯಕ್ತಿಗೆ ಸೇರಿದ ಹಳೆ ಮನೆಯ ಚಾವಣಿ ಮನೆಯಲ್ಲಿ ಮಲಗಿದ್ದ ಐದು ಮಂದಿಯ ಮೇಲೆ ಬುಧವಾರ ಮುಂಜಾನೆ ಸುಮಾರು 5.30ಕ್ಕೆ ಏಕಾಏಕಿ ಕುಸಿದಿದೆ. ಚಾವಣಿಯ ಚಪ್ಪಡಿ ಕಲ್ಲು ಹಾಗೂ ಗೋಡೆಗಳ ಅಡಿಯಲ್ಲಿ ಸಿಲುಕು ಸುಹೇಲ್ ಪುತ್ರಿ ಮೃತಪಟ್ಟಿದ್ದಾಳೆ.

ಸುಹೇಲ್ (36), ಕೌಸರ್ (30), ಐಯಾನ್ (13) ಹಾಗೂ ಇಜರ್ (4) ತೀವ್ರ ಗಾಯಗೊಂಡಿದ್ದು, ಕೋಲಾರ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಪ್ಪಡಿ ಕಲ್ಲುಗಳು ಹಾಗೂ ಗೋಡೆ ಕುಸಿದು ಬಿದ್ದ ಶಬ್ದಕ್ಕೆ ಸುತ್ತಮುತ್ತಲಿನ ಸಾರ್ವಜನಿಕರು ಓಡಿ ಬಂದು ಚಪ್ಪಡಿ ಕಲ್ಲುಗಳ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಹರಸಾಹಸಪಟ್ಟರು. ಅಷ್ಟರಲ್ಲಿ ಮಾಹೆ ನೂರ್ ಸ್ಥಳದಲ್ಲೇ ಮೃತಪಟ್ಟಿದ್ದರು. ಉಳಿದವರು ಗಂಭೀರ ಗಾಯಗೊಂಡಿದ್ದಾರೆ.

ಇನ್ನೂ ಐದು ಮಂದಿಯ ತಲೆ ಕೂದಲು ಸುಟ್ಟು ಕರಕಲಾಗಿದ್ದು, ಮೈ, ಕೈಗಳಲ್ಲಿ ಸುಟ್ಟು ಗಾಯಗಳಾಗಿವೆ. ಹಾಗಾಗಿ ಚಾವಣಿ ಕುಸಿಯಲು ಸಿಲಿಂಡರ್ ಸ್ಫೋಟವೇನಾದರೂ ಆಗಿರಬಹುದೇ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಚಾವಣಿ ಹಾಗೂ ಮನೆಯನ್ನು ಪರಿಶೀಲಿಸಿ, ಚಪ್ಪಡಿ ಕಲ್ಲುಗಳನ್ನು ಎತ್ತಿದರು. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಎಎಸ್ಪಿ ಮನಿಷಾ ಮನೋಹಿ, ಇನ್ಸ್ಪೆಕ್ಟರ್ ಅಣ್ಣಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಕುಮಾರ್, ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-18-121879156

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.