ಮುಳಬಾಗಿಲು: ತಾಲ್ಲೂಕಿನ ಆವಣಿ ಗ್ರಾಮದಲ್ಲಿ ಮುಳಬಾಗಿಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಡಬ್ಲ್ಯೂ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಏಳು ದಿನಗಳ ಸಮಾಜ ಕಾರ್ಯ ಗ್ರಾಮೀಣ ಕಲಿಕಾ ಶಿಬಿರವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಈ ವೇಳೆ ಪ್ರಾಂಶುಪಾಲ ಡಾ.ಜಿ.ಮುನಿವೆಂಕಟಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ವಿಷಯಗಳಲ್ಲಿ ಕಲಿತ ಕಲಿಕೆಯನ್ನು ಕೇವಲ ಪರೀಕ್ಷೆಗಳಿಗೆ ಮಾತ್ರ ಮೊಟಕುಗೊಳಿಸದೆ, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಸೇವೆಗೆ ಮುಂದಾಗಬೇಕು ಎಂದರು.

ಮನುಷ್ಯ ಕಲಿಯುವ ವಿದ್ಯೆ ಹಾಗೂ ಕಲಿಕೆ ಕೇವಲ ವೈಯಕ್ತಿಕವಾಗಿ ಬಳಕೆ ಮಾಡಿಕೊಂಡರೆ ಅದು ಸ್ವಾರ್ಥವಾಗುತ್ತದೆ. ಹಾಗಾಗಿ ಕಲಿತ ವಿದ್ಯೆ ಹಾಗೂ ಜ್ಞಾನ ಸಮಾಜಕ್ಕೆ ದಾರೆ ಎರೆಯುವ ಮೂಲಕ ಇತರರಿಗೂ ಜ್ಞಾನದ ಮೂಲಕ ದಾರಿದೀಪವಾಗಬೇಕೆಂದು ಹೇಳಿದರು.

ಹಿರಿಯ ಪ್ರಾಧ್ಯಾಪಕ ಡಾ.ಎಂ.ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿರುವ ಅಸಮಾನತೆ, ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಿ ಸಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕೆಂದು ತಿಳಿಸಿದರು.

ನಂತರ ವಿದ್ಯಾರ್ಥಿಗಳು ಆವಣಿಯಲ್ಲಿ ವರದಕ್ಷಿಣೆ, ಸಾಂಕ್ರಾಮಿಕ ಕಾಯಿಲೆಗಳು, ಲಿಂಗತಾರತಮ್ಯ ವಿಷಯಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಎಂ.ಕೃಷ್ಣಪ್ಪ, ಮೂರ್ತಿ, ವೆಂಕಟೇಶ್, ಎಲ್.ಕೇಶವ ಗಂಗಾಧರ ಮೂರ್ತಿ, ಎನ್.ಶಂಕರಪ್ಪ, ಶಶಿಕಲಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-18-87675507

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.