ಮುಳಬಾಗಿಲು: ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಗುಣ ಹಾಗೂ ಸಿಬ್ಬಂದಿ ಶನಿವಾರ ತಾಲ್ಲೂಕಿನ ತಾಯಲೂರು ಗ್ರಾಮದಲ್ಲಿರುವ ಬೇಕರಿ, ಚಿಲ್ಲರೆ ಅಂಗಡಿ ಹಾಗೂ ಆಹಾರ ಉತ್ಪನ್ನ ಮಾರಾಟದ ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿ ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು.

ತಾಯಲೂರು ಗ್ರಾಮದ ಮೂರು ಬೇಕರಿ, ತಿಂಡಿ ತಿನಿಸು ಮಾರಾಟದ ಗೂಡಂಗಡಿ, ಬೀದಿ ಬದಿ ಉತ್ಪನ್ನಗಳ ಮಾರಾಟದ ಮಳಿಗೆ ಹಾಗೂ ಹೋಟೆಲ್ಗಳ ಮೇಲೆ ದಾಳಿ ನಡೆಸಿ ಆಹಾರ ವಸ್ತುಗಳ ಗುಣಮಟ್ಟ, ಅವಧಿ ಮೀರಿದ ವಸ್ತುಗಳ ಪರಿಶೀಲನೆ, ಆಹಾರ ಉತ್ಪನ್ನ ಕಂಪನಿಗಳ ಮಾಹಿತಿ, ಸ್ವಚ್ಛತೆ, ಮಾರಾಟಗಾರರ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸಿದರು.

ತಾಯಲೂರಿನ ನ್ಯೂ ಬೆಂಗಳೂರು ಬೇಕರಿಯಲ್ಲಿ ಸ್ವಚ್ಛತೆ ಇಲ್ಲದಿರುವುದು, ನೊಂಗಳ ಕಾಟ ಹೆಚ್ಚಿರುವುದರಿಂದ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸಿದರು.

ನಂತರ ಮಾತನಾಡಿದ ಅವರು, ಯಾವುದೇ ಅಂಗಡಿ, ಹೋಟೆಲ್ ಮತ್ತಿತರರ ಮಳಿಗೆಗಳಲ್ಲಿ ಸ್ವಚ್ಛತೆ ಇಲ್ಲದಿದ್ದರೆ ಮೊದಲಿಗೆ ನೋಟಿಸ್ ನೀಡಿ ದಂಡ ವಿಧಿಸಲಾಗುವುದು. ಆದರೂ, ತಿದ್ದಿಕೊಳ್ಳದಿದ್ದಲ್ಲಿ ಅಂತಹ ಮಳಿಗೆಗಳಿಗೆ ಬೀಗ ಬೀಗ ಜಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆರೋಗ್ಯ ನಿರೀಕ್ಷಕ ಚಿದಾನಂದ ಮತ್ತಿತರರ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-18-1562952642

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.