ಮುಳಬಾಗಿಲು: ತಾಲ್ಲೂಕಿನ ಹೆಬ್ಬಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಗೊಲ್ಲಹಳ್ಳಿ ಗ್ರಾಮದಲ್ಲಿ ಮುಳಬಾಗಿಲು ರೋಟರಿ ಸಂಸ್ಥೆಯ ಕಾಮದೇನು ಪ್ರಾಜೆಕ್ಟ್ ವತಿಯಿಂದ ಬಡ ಮಹಿಳೆಯರಿಗೆ ಹಸುಗಳನ್ನು ಉಚಿತವಾಗಿ ವಿತರಿಸಲಾಯಿತು.

ರೋಟರಿ ಸಂಸ್ಥೆಯ ಪೂರ್ವ ವಿಭಾಗದ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್. ನಾಗರಾಜ್ ಮಾತನಾಡಿ, ‘ರೋಟರಿ ಸಂಸ್ಥೆ ಹಾಗೂ ಕೋಮುಲ್ ಸಹಾಯದೊಂದಿಗೆ ಹಾಲು ಸರಬರಾಜು ಮಾಡುವ ಹಾಲು ಉತ್ಪಾದಕರಿಗೆ ಹೈನುಗಾರಿಕೆ ಉದ್ಯಮ ಸ್ಥಾಪಿಸುವ ತಂತ್ರಜ್ಞಾನವನ್ನು ಕಲಿಸಲು ಸ್ವೀಡನ್ ಮತ್ತು ಡೆನ್ಮಾರ್ಕ್ ದೇಶಗಳಿಗೆ ಪ್ರವಾಸ ಕಳುಹಿಸಿಕೊಡಲಾಗುವುದು’ ಎಂದು ಹೇಳಿದರು.

ಈ ಯೋಜನೆ ಮೂಲಕ ಪಡೆದ ಹಸುಗಳನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಆರ್ಥಿಕ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳಾಗಬೇಕು. ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಕೊಡಿಸಿ ಉನ್ನತ ಸ್ಥಾನಕ್ಕೇರುವಂತೆ ಬೆಳೆಸಬೇಕು ಎಂದು ಹೇಳಿದರು.

ಮುಳಬಾಗಲು ರೋಟರಿ ಸೆಂಟ್ರಲ್ ನಾಮನಿರ್ದೇಶಕ ಅಧ್ಯಕ್ಷ ಎಂ. ಗೊಲ್ಲಹಳ್ಳಿ ಪ್ರಭಾಕರ್ ಮಾತನಾಡಿ, ಸ್ವಗ್ರಾಮದ ಮಹಿಳೆಯರ ಜೀವನಕ್ಕಾಗಿ 16 ಹಸುಗಳನ್ನು ನೀಡಲಾಗುತ್ತಿದೆ ಎಂದರು.

ರೋಟರಿ ಗವರ್ನರ್ ಬಿ.ಜಿ. ಶ್ರೀಧರ್, ಕಾಡೇನಹಳ್ಳಿ ಕೆ.ಎನ್. ನಾಗರಾಜ್, ಕೋಮುಲ್ ಪಶ್ಚಿಮ ನಿರ್ದೇಶಕ ಬಿ.ವಿ. ಸಾಮೇಗೌಡ, ಎಂ.ಗೊಲ್ಲಹಳ್ಳಿ ಪ್ರಭಾಕರ್, ಎಂ.ಎಸ್. ಶ್ರೀನಿವಾಸರೆಡ್ಡಿ , ರವೀಂದ್ರನಾಥ್, ನಾರಾಯಣ್, ಶ್ರೀನಿವಾಸ ರೆಡ್ಡಿ, ಶಂಕರಪ್ಪ, ರಘುನಾಥಯ್ಯ, ಅಶೋಕ್ ಕುಮಾರ್, ಪಿ.ಎಸ್. ವರದರಾಜಪ್ಪ, ರಾಮಚಂದ್ರಪ್ಪ, ಗಂಗಾಧರ್, ಶ್ರೀನಿವಾಸ್, ನಾಗಾರ್ಜುನ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-18-486196513

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.