ಮುಳಬಾಗಿಲು: ನಗರದ ಮುತ್ಯಾಲಪೇಟೆಯಲ್ಲಿರುವ ಗಂಗಮಾಂಭ ದೇವಿಯ 24ನೇ ವರ್ಷದ ಗಂಗಶಿರಸ್ಸು ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಜಾತ್ರಾ ಮಹೋತ್ಸವದ ಪ್ರಯುಕ್ತ ಏ.24 ರಿಂದ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಮಂಗಳವಾರ ಗಂಗಮಾಂಭ ದೇವಿ ಶಿರಸ್ಸನ್ನು (ಮೂರ್ತಿ) ನಗರದಲ್ಲಿ ಮೆರವಣಿಗೆ ನಡೆಯಿತು.

ನಾಲ್ಕು ದಿನಗಳಿಂದ ದೇವರ ಮೂಲ ವಿಗ್ರಹವನ್ನು ಒಂದೊಂದು ದಿನ ಒಂದೊಂದು ಬಗೆಯ ಅಲಂಕಾರ ಮಾಡಿ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಸೋಮವಾರ ಮಧ್ಯರಾತ್ರಿ ಆರಂಭವಾದ ಗಂಗಶಿರಸ್ಸು ಮೆರವಣಿಗೆ ಮುತ್ಯಾಲಪೇಟೆಯ ಎಲ್ಲಾ ಬೀದಿಗಳಲ್ಲಿ ನಡೆಯಿತು. ಮೆರವಣಿಗೆ ಮನೆಗಳ ಬಳಿಗೆ ಬರುತ್ತಿದ್ದಂತೆ ಮಹಿಳೆಯರು ಪೂಜೆ ಸಲ್ಲಿಸಿದರು.

ನಂತರ ಮುಂಜಾನೆ ಶಿರಸ್ಸು ಮೆರವಣಿಗೆ ಕಾರ್ಯಕ್ರಮ ಮುಗಿಯಿತು. ಮಹಿಳೆಯರು ತಂಬಿಟ್ಟಿನ ದೀಪಗಳನ್ನು ದೇವರಿಗೆ ಸಲ್ಲಿಸಿದರು. ವಿವಿಧ ಗ್ರಾಮದ ಭಕ್ತರು ಸಹ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-18-643099942

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.