ಮುಳಬಾಗಿಲು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕಾಲೇಜು ವಾರ್ಷಿಕೋತ್ಸವ ಸಂಭ್ರಮ 2025-26 ಕಾರ್ಯಕ್ರಮ ನಡೆಯಿತು.

ಈ ವೇಳೆ ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಮುಳಬಾಗಿಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ₹9.5 ಕೋಟಿ ಅನುದಾನವನ್ನು ತಂದಿದ್ದು, ಮುಂದೆ ಮತ್ತಷ್ಟು ಅನುದಾನದಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಇಂದಿನ ಜಾಗತೀಕರಣ, ಯಾಂತ್ರೀಕರಣ, ತಂತ್ರಜ್ಞಾನ ಹಾಗೂ ಎಐ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗೆ ತಕ್ಕಂತೆ ಜಾಗತಿಕ ಪ್ರಪಂಚಕ್ಕೆ ಸನ್ನದ್ದರಾಗಬೇಕು ಎಂದರು.

ಕಾಲೇಜಿಗೆ ಈ ಬಾರಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಎರಡನೇ ರ್ಯಾಂಕ್ ಬಂದಿರುವುದು ಖುಷಿಯ ವಿಚಾರ. ಜೊತೆಗೆ ಅನೇಕ ಮಂದಿ ವಿದ್ಯಾರ್ಥಿಗಳು ಕೆಲವು ವಿಷಯಗಳಲ್ಲಿ 100/100 ಅಂಕ ಪಡೆದಿರುವುದು ಅತ್ಯುತ್ತಮ ಸಾಧನೆ ಎಂದು ಹೇಳಿದರು.

ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಟ್ಟರು. ರ್ಯಾಂಕ್ ಪಡೆದ ವಿದ್ಯಾರ್ಥಿನಿ ಎನ್.ಜ್ಯೋತಿಕಾ ಅವರನ್ನು ಅಭಿನಂದಿಸಿದರು. ನಾನಾ ಬಗೆಯ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಬಹುಮಾನ ವಿತರಿಸಲಾಯಿತು.

ಡಾ.ಜಿ.ಮುನಿವೆಂಕಟಪ್ಪ, ಡಾ.ಎಂ.ಕೃಷ್ಣಪ್ಪ, ಟಿ.ಎಸ್.ಶ್ರೀನಿವಾಸ್, ಎಂ.ಎನ್.ಮೂರ್ತಿ, ರಘುಪತಿ ರೆಡ್ಡಿ, ಗೊಲ್ಲಹಳ್ಳಿ ಜಗದೀಶ್, ಮೋಹನ ರೆಡ್ಡಿ, ಶ್ರೀಧರ್, ಎಲ್.ಸೀನಪ್ಪ, ಲಾರೆನ್ಸ್ ಪ್ರಸನ್ನ, ಆದಿನಾರಾಯಣ, ವೆಂಕಟೇಶ್, ದಿನೇಶ್, ಭಾಗ್ಯಲಕ್ಷ್ಮಿ, ಡಾ.ನಳಿನಿ, ವಸುಂಧರ, ಉಮಾ, ಶಶಿಕಲಾ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-18-2073167595

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.