ಮುಳಬಾಗಿಲು: ಇರಾನ್ ಮತ್ತು ಇಸ್ರೇಲ್, ಅಮೆರಿಕ ನಡುವಿನ ಯುದ್ಧದ ಪರಿಣಾಮ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಸಮಸ್ಯೆ ಎದುರಾಗಿದ್ದು, ಅನೇಕ ಹೋಟೆಲ್ ಮಾಲೀಕರು ಎಲ್ಪಿಜಿ ಬಿಟ್ಟು ಸೌದೆ ಒಲೆ ಮೊರೆ ಹೋಗಿದ್ದಾರೆ. ಇನ್ನೂ ಕೆಲವರು ಖಾಲಿ ಸಿಲಿಂಡರ್ಗಳನ್ನೇ ಒಲೆಗಳನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ.

ಗೃಹ ಬಳಕೆಯ ಎಲ್ಪಿಜಿಗೆ ಸರಬರಾಜಾಗುತ್ತಿದೆ. ಆದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಹೋಟೆಲ್ ಮಾಲೀಕರು ಹಳೆ ಪದ್ಧತಿಯಾದ ಸೌದೆ ಒಲೆ ಬಳಸುತ್ತಿದ್ದಾರೆ. ಇನ್ನೂ ಕೆಲವರು ಆಧುನಿಕತೆಗೆ ತಕ್ಕಂತೆ ಸಿಲಿಂಡರ್ಗಳನ್ನೇ ಒಲೆಗಳನ್ನಾಗಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ.

ಹಿಂದಿನ ಕಾಲದಲ್ಲಿ ಕೇವಲ ಮಣ್ಣು ಅಥವಾ ಕಲ್ಲುಗಳಿಂದ ನಿರ್ಮಿತವಾದ ಒಲೆಗಳಿಂದ ಆಹಾರ ತಯಾರಿಸುತ್ತಿದ್ದ ಜನತೆ, ಕಾಲ ಕಳೆದಂತೆ ಆಧುನಿಕತೆಯಿಂದ ಒಲೆ ಪರಿಕಲ್ಪನೆಯನ್ನು ಮರೆತಿದ್ದರು. ಆದರೆ, ಯುದ್ಧದ ಪರಿಣಾಮ ಪುನಃ ಸೌದೆ ಒಲೆಯತ್ತಾ ಮುಖ ಮಾಡಿದ್ದಾರೆ.

ಇನ್ನು ವಾಣಿಜ್ಯ ಸಿಲೆಂಡರ್ ಸಮಸ್ಯೆಯಿಂದ ಅನೇಕ ಪಾದಚಾರಿ, ಫಾಸ್ಟ್ ಫುಡ್ ಕೇಂದ್ರಗಳು ಮುಚ್ಚಿದ್ದು, ಹೋಟೆಲ್ ವ್ಯಾಪಾರ ಬಿಟ್ಟು ತರಕಾರಿ ಮಾರಾಟ ಹಾಗೂ ಇತರೆ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸೌದೆ ಒಲೆಯಲ್ಲಿ ಆಹಾರ ತಯಾರಿಸುತ್ತಿದ್ದಾರೆ.

ನಗರದಲ್ಲಿ ಮಣ್ಣಿನ ಒಲೆ ನಿರ್ಮಿಸುವ ಗೋಜಿಗೆ ಹೋಗದೆ ಖಾಲಿ ಸಿಲೆಂಡರುಗಳನ್ನೇ ಒಲೆಯ ಮಾದರಿಯಲ್ಲಿ ಮಾರ್ಪಾಡು ಮಾಡಿಕೊಂಡು ಆಹಾರ ತಯಾರಿಸುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-18-1435218063

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.