ಮುಳಬಾಗಿಲು: ಬಕ್ರೀದ್ ಹಬ್ಬದ ಪ್ರಯುಕ್ತ ಮುಳಬಾಗಿಲು ನಗರದಲ್ಲಿ ಸೋಮವಾರ ಸಂಜೆ ಎಎಸ್ಪಿ ಮನಿಷಾ ಮನೋಹಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ನಗರದ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತ, ಸೋಮೇಶ್ವರ ಪಾಳ್ಯ, ವಿಠಲೇಶ್ವರ ನಗರ, ಮುತ್ಯಾಲಪೇಟೆ, ಕುರುಬರ ಪೇಟೆ, ಶಾಮೀರ್ ಮೊಹಲ್ಲಾ, ರಹಮತ್ ನಗರ, ರಾಮಸಮುದ್ರಂ ರಸ್ತೆ, ಕೆಜಿಎಫ್ ರಸ್ತೆ, ಕೆ.ಬೈಯಪ್ಪನಹಳ್ಳಿ ರಸ್ತೆ, ನೂಗಲಬಂಡೆ, ನಂಗಲಿ ರಸ್ತೆ ಮತ್ತಿತರರ ಮುಖ್ಯ ಬೀದಿಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿ ಸಾರ್ವಜನಿಕರರಿಗೆ ಪೊಲೀಸರು ಸದಾ ರಕ್ಷಣೆಯಲ್ಲಿ ಇರುತ್ತಾರೆಂದು ಸಾರಿದರು.

ತಾಲ್ಲೂಕಿನಲ್ಲಿ ಗುರುವಾರ ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದು, ಧಾರ್ಮಿಕ ಕೋಮುಗಲಭೆ ಉಂಟಾಗುವಂತೆ ವರ್ತಿಸಬಾರದು. ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟು ಮಾಡಬಾರದು. ಇತರರಿಗೆ ತೊಂದರೆ ಆಗುವಂತೆ ವರ್ತಿಸಬಾರದು. ಕರ್ಕಶ ಶಬ್ದ ಮಾಡಬಾರದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಬಕ್ರೀದ್ ಹಬ್ಬದಂದು ನಿಗದಿತ ಮಾರ್ಗದಲ್ಲಿ ಸಾಮೂಹಿಕ ಪ್ರಾರ್ಥನೆಗೆ ತೆರಳಿ ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ತಿಳಿಸಿದರು.

ಸರ್ಕಲ್ ಇನ್ಸ್ಪೆಕ್ಟರ್ ಕೆ.ಜೆ.ಸತೀಶ್ ಕುಮಾರ್, ಸುಧಾಕರ ರೆಡ್ಡಿ, ಹಾಗೂ ಮುಳಬಾಗಿಲು ನಗರ, ಗ್ರಾಮಾಂತರ ಹಾಗೂ ನಂಗಲಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-18-2059658111

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.