ಮುಳಬಾಗಿಲು: ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶನಿವಾರ ತಾಲ್ಲೂಕು ಆರೋಗ್ಯ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ವತಿಯಿಂದ ವಿಶ್ವ ತಂಬಾಕು ನಿಷೇಧ ದಿನದ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.

ಈ ವೇಳೆ ಸಿವಿಲ್ ಪ್ರಧಾನ ನ್ಯಾಯಾಧೀಶ ಜಿ.ಹರೀಶ್ ಮಾತನಾಡಿ, ಧೂಮಪಾನ ಮಾಡುವವರು ಕೆಟ್ಟವರಲ್ಲ. ಬದಲಾಗಿ ಧೂಮಪಾನವೇ ಕೆಟ್ಟದ್ದು. ಹಾಗಾಗಿ ಧೂಮಪಾನದಿಂದ ಯಾರೂ ಬಲಿಯಾಗಬಾರದೆಂದು ತಿಳಿಸಿದರು.

ಧೂಮಪಾನ ಇಡೀ ಮನುಷ್ಯನ ಬದುಕನ್ನೇ ಸರ್ವನಾಶ ಮಾಡುತ್ತದೆ. ಜೊತೆಗೆ ಧೂಮಪಾನ ಮಾಡುವ ಸಮಯದಲ್ಲಿ ತಮ್ಮ ಪಕ್ಕದಲ್ಲಿ ಇರುವವರೂ ಸಹ ಹೊಗೆ ಹೀರುವಂತೆ ಮಾಡುತ್ತಾರೆ. ಇದರಿಂದ ಧೂಮಪಾನಿಗಳು ಕೆಡುವುದಲ್ಲದೆ ಸುತ್ತಮುತ್ತಲಿನ ವಾತಾವರಣ ಹಾಗೂ ಜನತೆಯನ್ನೂ ಸಹ ನಾಶ ಮಾಡುತ್ತದೆ ಎಂದು ಹೇಳಿದರು.

ತಂಬಾಕು, ನಶೆಯ ವಸ್ತುಗಳು, ಗಾಂಜಾ, ಡ್ರಗ್ಸ್, ಪಾನ್ ಪರಾಗ್ ಮತ್ತಿತರರ ಚಟಗಳು ಮನುಷ್ಯನನ್ನು ಸಾವಿನ ಕಡೆಗೆ ಕೊಂಡೊಯ್ಯುತ್ತದೆ. ಹಾಗಾಗಿ ಮನುಷ್ಯನ ಜೀವಕ್ಕೆ ಹಾನಿಯಾಗುವ ವಸ್ತುಗಳನ್ನು ಸೇವಿಸುವ ಮೂಲಕ ತಿಳಿದೂ ತಿಳಿದೂ ತಮ್ಮನ್ನು ತಾವೇ ಸಾವಿನ ಕಡೆಗೆ ಎಳೆದುಕೊಂಡು ಹೋಗುವುದನ್ನು ತಡೆಯಬೇಕು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ಸದಾಶಿವಯ್ಯ ಮಾತನಾಡಿ, ತಂಬಾಕು ಸೇವನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವಿಸುವುದಾಗಲಿ ಅಥವಾ ಉಗುಳುವುದಾಗಲಿ ಅಪರಾಧ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕನ್ನು ಸೇವಿಸಿ, ಉಗುಳುವುದು ಮಾಡಿದರೆ ಕಾನೂನು ರೀತಿಯಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ತಂಬಾಕು ಹಾಗೂ ಪದಾರ್ಥಗಳಿಂದ ದೂರವಿರಬೇಕು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮಿದೇವಮ್ಮ ಮಾತನಾಡಿ, ತಂಬಾಕು ಮನುಷ್ಯನನ್ನು ಆಂತರಿಕವಾಗಿ ತನಗೇ ಅರಿವಿಲ್ಲದೆ ನಾಶ ಪಡಿಸುತ್ತದೆ. ನಂತರ, ದೈಹಿಕ ನ್ಯೂನ್ಯತೆಗಳಿಗೆ ಕಾರಣವಾಗಬೇಕಾಗುತ್ತದೆ. ಹಾಗಾಗಿ ತಂಬಾಕಿನಂತಹ ವಸ್ತುಗಳ ಬಳಕೆ ಮನುಷ್ಯನ ಆರೋಗ್ಯಕ್ಕೆ ಮಾರಕ ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ, ಪಿ.ಎಂ.ಸದಾಶಿವಯ್ಯ, ಎಂ.ರಮೇಶ್, ವಿ.ರಮೇಶ್ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-18-1193208219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.