ಮುನಿಯಪ್ಪರ ಸಾಧನೆ ಶೂನ್ಯ: ಮಂಜು

ಭಾನುವಾರ, ಏಪ್ರಿಲ್ 21, 2019
26 °C

ಮುನಿಯಪ್ಪರ ಸಾಧನೆ ಶೂನ್ಯ: ಮಂಜು

Published:
Updated:

ಕೋಲಾರ: ‘ಸ್ವಾರ್ಥ ಹಾಗೂ ಕುಟುಂಬ ರಾಜಕಾರಣ ಮಾಡುತ್ತಾ ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಕೆ.ಎಚ್.ಮುನಿಯಪ್ಪರನ್ನು ಸೋಲಿಸಲು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ’ ಎಂದು ಜನ ಜಾಗೃತ ಮತದಾರರ ವೇದಿಕೆ ಅಧ್ಯಕ್ಷ ಮಂಜು ಹೇಳಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಘಟನೆಯಲ್ಲಿ ಸುಮಾರು 2 ಸಾವಿರ ಸದಸ್ಯರಿದ್ದು, ಇವರೆಲ್ಲರೂ ಈ ಬಾರಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರೆ ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಾರೆ’ ಎಂದರು.

‘ಕೋಲಾರ ಕ್ಷೇತ್ರದಲ್ಲಿ 28 ವರ್ಷಗಳಿಂದ ಸಂಸದರಾಗಿರುವ ಮುನಿಯಪ್ಪರ ಸಾಧನೆ ಶೂನ್ಯ. ಅವರು ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲೆಗೆ ಕೈಗಾರಿಕೆಗಳನ್ನು ತರಲಿಲ್ಲ, ರೈತರ ಸಮಸ್ಯೆ ಪರಿಹಾರಕ್ಕೆ ಶಾಶ್ವತ ನೀರಾವರಿ ಯೋಜನೆ ರೂಪಿಸಲಿಲ್ಲ’ ಎಂದು ದೂರಿದರು.

‘ಮುನಿಯಪ್ಪ ಮತ್ತು ಅವರ ಕುಟುಂಬ ಸದಸ್ಯರು ಮಾತ್ರ ನಿರಂತರವಾಗಿ ಅಧಿಕಾರ ಅನುಭವಿಸುತ್ತಿದ್ದಾರೆ. ಸಂಸದರಾಗುವ ಮುನ್ನ 4 ಎಕರ ಜಮೀನು ಹೊಂದಿದ್ದ ಮುನಿಯಪ್ಪ ಅವರು ಈಗ ಸುಮಾರು 700 ಎಕರೆ ಜಮೀನಿನ ಒಡೆಯರು. ಅವರು ಸಂಬಂಧಿಕರು ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಸಾಕಷ್ಟು ಬೇನಾಮಿ ಆಸ್ತಿ ಮಾಡಿದ್ದಾರೆ’ ಎಂದು ಆರೋಪಿಸಿದರು.

ವೇದಿಕೆ ಸದಸ್ಯ ನಾಗರಾಜ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !