ಟೇಕಲ್: ಕೆ.ಜಿ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಖಾಯಂ ವಾಸದ ಮನೆಗಳು, ಅಂಗಡಿಗಳನ್ನು ಸರ್ವೆ ಮಾಡಿ ಶಾಶ್ವತ ನಂಬರ್ ಅನ್ನು ಅಳವಡಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಆರ್. ಯಲ್ಲಪ್ಪ ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮನೆಗಳು ಮತ್ತು ಅಂಗಡಿಗಳನ್ನು ಸಮೀಕ್ಷೆ ಮಾಡಿ ಶಾಶ್ವತ ನಂಬರ್ ಗುರುತಿಸಲು ಖಾಸಗಿ ಕಂಪನಿಯೊಂದು ಮಾನ್ಯತೆ ಪಡೆದಿದ್ದು, ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಹೇಳಿದರು.
ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳ ಮನೆ–ಮನೆಗೆ ಪಂಚಾಯಿತಿಯಲ್ಲಿನ ಕಡತದ ಅನ್ವಯ ಮಾಹಿತಿ ಆಧರಿಸಿ ಆ ಮನೆಗಳಿಗೆ ಸಂಖ್ಯೆ ನೀಡಲಾಗುತ್ತದೆ. ಇದಕ್ಕೆ ಆಯಾ ಗ್ರಾಮ ಪಂಚಾಯಿತಿ ಸದಸ್ಯರು ಸಹಕರಿಸಬೇಕು. ಇದಕ್ಕೆ ₹50 ಶುಲ್ಕವಿರಲಿದ್ದು, ರಶೀದಿ ನೀಡಲಾಗುವುದು ಎಂದು ತಿಳಿಸಿದರು.