ಭಾನುವಾರ, ನವೆಂಬರ್ 1, 2020
19 °C

ಮುಳಬಾಗಿಲು: ರಕ್ಷಣಗಿರಿ ಬೆಟ್ಟಕ್ಕೆ ಅಧಿಕಾರಿಗಳ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ತಾಲ್ಲೂಕಿನ ದುಗ್ಗಸಂದ್ರ ಹೋಬಳಿ ಗೂಕುಂಟೆ ಗ್ರಾಮದಲ್ಲಿನ ಚರ್ಚ್‌ ಬಳಿಯ ರಕ್ಷಣಗಿರಿ ಬೆಟ್ಟಕ್ಕೆ ಅಪರಿಚಿತ ವ್ಯಕ್ತಿಗಳು ಭೇಟಿ ನೀಡಿ ಕೋಮುಗಲಭೆಗೆ ಕಾರಣರಾಗುತ್ತಿದ್ದಾರೆ ಎಂದು ಗ್ರಾಮಸ್ಥರು ತಾಲ್ಲೂಕು ಆಡಳಿತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ತಾಲ್ಲೂಕು ಅಧಿಕಾರಿಗಳು ಮತ್ತು ಪೊಲೀಸರು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮಸ್ಥರು ತಮ್ಮ ಮನವಿಯಲ್ಲಿ, ಸುಮಾರು 350ವರ್ಷಗಳ ಹಿಂದೆ ಗ್ರಾಮದಲ್ಲಿ ಯೇಸು ದೇವಸ್ಥಾನ ಪ್ರಾರಂಭವಾಗಿದೆ. ಪ್ರಾರಂಭದಿಂದಲೂ ಇಂದಿನವರೆಗೆ ಯಾವುದೇ ಗಲಭೆ ನಡೆದಿಲ್ಲ. ಪೂಜಾ ಕಾರ್ಯಕ್ರಮ ಸಾಂಪ್ರಾದಾಯಕವಾಗಿ ನಡೆಯುತ್ತಿದೆ. ಕೆಲವು ದಿನಗಳಿಂದ ರಕ್ಷಣಗಿರಿ ಬೆಟ್ಟದ ಬಳಿ ಕೆಲವೊಂದು ಅಪರಿಚಿತ ವ್ಯಕ್ತಿಗಳು ಓಡಾಟ ನಡೆಸಿ ಪ್ರಾರ್ಥನೆ ಮಾಡುವವರಿಗೆ ಅತಂಕ ಹುಟ್ಟಿಸುತ್ತಿದ್ದಾರೆ ಎಂದು ದೂರಿದ್ದಾರೆ. ಗ್ರಾಮಕ್ಕೆ ಬರುವ ಅಪರಿಚಿತರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಕೆ.ಎನ್.ರಾಜಶೇಖರ್, ಸಬ್ಇನ್‌ಸ್ಪೆಕ್ಟರ್ ಪ್ರದೀಪ್‌ ಸಿಂಗ್, ಕಂದಾಯ ನಿರೀಕ್ಷಕ ಮಂಜುನಾಥ್, ಗೋವಿಂದರಾಜ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು