ಶನಿವಾರ, ಡಿಸೆಂಬರ್ 7, 2019
16 °C

ಜೆಒಸಿ ನೌಕರರ ಸೇವೆ ಪರಿಗಣಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಒಸಿ ನೌಕರರ ಸೇವೆಯನ್ನು ಪರಿಗಣಿಸಿ ಸಕ್ರಮ ಹುದ್ದೆಗಳಲ್ಲಿ ಮುಂದುವರೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಜೆಒಸಿ ನೌಕರರ ಸಂಘದ ಸಂಘದ ಪ್ರತಿನಿಧಿಗಳು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ಗೆ ಶನಿವಾರ ಮನವಿ ಸಲ್ಲಿಸಿದರು.

ಜೆಒಸಿ ನೌಕರರ ಸಂಘದ ಪ್ರತಿನಿಧಿ ಎನ್.ಚಿನ್ನಪ್ಪ ಮಾತನಾಡಿ, ‘ಜಿಲ್ಲೆಯ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ೨೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಇತರೆ ನೌಕರರ ಸಮಾನ ಅವಕಾಶ ನೀಡಬೇಕು. ಸೇವಾ ಹಿರಿತನ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ಜೆಒಸಿಯ ವಿವಿಧ ಕೋರ್ಸ್‌ಗಳಲ್ಲಿ ಸಂಭಾವನೆಯ ಆಧಾರದ ಮೇಲೆ ಸೇವೆ ಸಲ್ಲಿಸಿರುವ ನೌಕರರನ್ನು ರಾಜ್ಯ ಸರ್ಕಾರ ೨೦೧೨ರಲ್ಲಿ ವಿವಿಧ ಇಲಾಖೆಗಳಲ್ಲಿ ವಿಲೀನಗೊಳಿಸಿ ಸೇವಾ ಸಕ್ರಮಾತಿ ಮಾಡಿದ್ದು, ನಮ್ಮ ಬದುಕಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಭದ್ರತೆ ನೀಡಿದರು’ ಎಂದು ತಿಳಿಸಿದರು.

‘20 ವರ್ಷಗಳಿಗೂ ಅಧಿಕ ಕಾಲ ಸಂಭಾವನೆಯ ಆಧಾರದ ಮೇಲೆ ಕೆಲಸ ಮಾಡಿದ ಜೆಒಸಿ ನೌಕರರು ಇದೀಗ ಸಕ್ರಮಗೊಂಡಿದ್ದು, ಹಲವಾರು ಮಂದಿ ನಿವೃತ್ತಿ ಹಂಚಿನಲ್ಲಿದ್ದಾರೆ. ಸೇವೆಯನ್ನು ಮಾತ್ರ ಪರಿಗಣಿಸಿರವುದರಿಂದ ನಿವೃತ್ತಿ ವೇತನ, ಬಡ್ತಿ ಯಾವುದೂ ಸಿಗುದಿಲ್ಲ, ನಂತರದ ದಿನಗಳಲ್ಲಿ ಜೀವನ ನಡೆಸುವುದು ಹೇಗೆ ಎಂಬ ಆತಂಕ ಎದುರಾಗಿದೆ’ ಎಂದು ಹೇಳಿದರು.

‘ಹಿಂದಿನ ಸೇವೆಯನ್ನು ಮಾತ್ರ ಕೇಳುತ್ತಿದ್ದೆವೆ, ಯಾವುದೇ ಆರ್ಥಿಕ ಸೌಕರ್ಯ ಕೇಳುತ್ತಿಲ್ಲ. ಇದೀಗ ಕೆಲವರಿಗೆ ಒಂದೆರಡು ವರ್ಷ ಸೇವಾವಧಿ ಸಿಗುವುದರಿಂದ ಬದುಕು ಅತಂತ್ರವಾಗಿದೆ, ಪಿಂಚಿಣಿ ಸೌಕರ್ಯವೂ ಸಿಗುವುದಿಲ್ಲ, ಇದರಿಂದಾಗಿ ನಮ್ಮ ಹಿಂದಿನ ಸೇವೆ ಪರಿಗಣಿಸಬೇಕು’ ಎಂದು ಮನವಿ ಮಾಡಿದರು.

ಜೆಒಸಿ ನೌಕರರ ಸಂಘದ ಪ್ರತಿನಿಧಿಗಳಾದ ವಿ.ಲಕ್ಷ್ಮಿನಾರಾಯಣ, ಸಿ.ಎಲ್.ಶ್ರೀನಿವಾಸಲು, ವೇಮಣ್ಣ, ಕೆ.ಸಿ.ವೇಣು, ಎಂ.ಆರ್.ಹೇಮಾವತಿ, ವಿ.ಜೆ.ದೀಪಾ, ಆರ್.ವೆಂಕಟಪತಿ, ಚಂದ್ರಶೇಖರ್, ಸರಸ್ವತಿ, ಶಶಿರೇಖಾ, ವೆಂಕಟೇಶಪ್ಪ, ಶ್ರೀನಾಥ್, ಚಲಪತಿ, ಜೈಪ್ರಕಾಶ್, ಟಿ.ಸಿ.ನಾರಾಯಣಸ್ವಾಮಿ, ಶ್ರೀರಾಮರೆಡ್ಡಿ, ನಾಗರಾಜ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)