ಬುಧವಾರ, ನವೆಂಬರ್ 13, 2019
23 °C

ನ್ಯುಮೋನಿಯ ಜ್ವರ: ಶಾಲಾ ಬಾಲಕಿ ಸಾವು

Published:
Updated:

ಮುಳಬಾಗಿಲು: ನ್ಯುಮೋನಿಯ ಜ್ವರಕ್ಕೆ ಶಾಲಾ ಬಾಲಕಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ನಗರದ ಮುತ್ಯಾಲಪೇಟಿ (ಕೊಲಿಮಿಕುಂಟೆ) ವಾಸಿಯಾದ ವೆಂಕಟಾಚಲಪತಿ ಮತ್ತು ಗೀತಾ ಅವರ ಪುತ್ರಿ ಮಾನಸ (8) ಮೃತ ಬಾಲಕಿ.

ಶಿವಕೇಶವನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ಮಾನಸಗೆ ಮಂಗಳವಾರ ಒಂದು ದಿವಸ ಬಂದ ಜ್ವರದಿಂದ ಮಗು ಸಾಕಷ್ಟು ನರಳಿದೆ ವಾಂತಿ ಕಾರಣ ನಿಶಕ್ತಿಗೊಂಡಿದ್ದಳು. ಮಗುವನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು ಪ್ರಯೋಜನವಾಗದೇ ಮೃತಪಟ್ಟಿದ್ದಾಳೆ. ನ್ಯುಮೋನಿಯ ಜ್ವರ ಮಗುವಿನ ಸಾವಿಗೆ ಕಾರಣ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

 

ಪ್ರತಿಕ್ರಿಯಿಸಿ (+)