ಸೋಮವಾರ, ಜುಲೈ 26, 2021
21 °C

ಚೀನಾ ಧ್ವಜಕ್ಕೆ ಬೆಂಕಿ; ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಗಡಿಯಲ್ಲಿ ಕಾಲು ಕೆರೆದು ಜಗಳ ತೆಗೆಯುತ್ತಿರುವ ಚೀನಾ ವರ್ತನೆ ಖಂಡಿಸಿ ಬಜರಂಗದಳ ಕಾರ್ಯಕರ್ತರು ಚೀನಾ ಧ್ವಜಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬಸ್‌ ನಿಲ್ದಾಣ ವೃತ್ತದಲ್ಲಿ ಚೀನಾ ದಾಳಿಯಿಂದ ವೀರಮರಣ ಅಪ್ಪಿದ ಯೋಧರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಮುಖಂಡರು, ‘ಭಾರತ ಶಾಂತಿ ಬಯಸುತ್ತದೆ. ಆದರೆ ತನ್ನ ಸಾರ್ವಭೌಮತೆಗೆ ಧಕ್ಕೆ ಬಂದರೆ ಸಹಿಸಿಕೊಂಡು ಸುಮ್ಮನಿರಲ್ಲ ಎಂಬುದನ್ನು ನಮ್ಮ ಯೋಧರು ಚೀನಾ ಸೈನಿಕರಿಗೆ ತೋರಿಸಿಕೊಟ್ಟಿದ್ದಾರೆ’ ಎಂದರು.

ಚೀನಾದ ಉತ್ಪನ್ನಗಳನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿ, ಚೀನಾ ವಿರುದ್ಧ ಘೋಷಣೆ ಕೂಗಿದರು.

ಬಾಬು, ವಿಜಯಕುಮಾರ್, ಡಿ.ಆರ್.ನಾಗರಾಜ್, ಅಪ್ಪಿ, ಸಾಯಿಕುಮಾರ್, ಸಾಯಿಸುಮನ್, ಸಾಯಿಮೌಳಿ, ಎಬಿವಿಪಿ ಹರೀಶ್, ವಿನಯ್, ಭವಾನಿ, ಪ್ರವೀಣ್, ಆನಂದ್, ಸುಧಾಕರ್, ಕುಮಿ, ದಮ್ಮಿ,ದೇವರಾಜ್, ಸುನಿ, ರಾಜೇಶ್, ಅಭಿ, ಮನು, ಅಮ್ಸ್, ಸಂದೇಶ್, ಮಂಜು, ಯಶವಂತ್, ಮಾದೇಶ್, ಶ್ರೀಧರ್, ನಂದೀಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು