ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಷಡ್ಯಂತರದಿಂದ ಪ್ರತಿಭಟನೆ

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿಕೆ
Last Updated 28 ಡಿಸೆಂಬರ್ 2019, 10:21 IST
ಅಕ್ಷರ ಗಾತ್ರ

ಕೋಲಾರ: ‘ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಸರ್ಕಾರ ಘೋಷಿಸಿದ್ದ ಪರಿಹಾರಕ್ಕೆ ತಡೆ ಹಿಡಿದಿದೆ. ಅನೇಕರಿಗೆ ಹೋರಾಟ ಏನಕ್ಕೆ ಮಾಡುತ್ತಿದ್ದೇವೆ ಎಂಬ ಅರಿವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರತಿಭಟನೆ ಕುರಿತು ಕೆಲ ವ್ಯಕ್ತಿಗಳನ್ನ ಕೇಳಿದಾಗ ಗೊತ್ತಿಲ್ಲ ಎಂದು ಹೇಳಿದ್ದಾರೆ, ಇನ್ನು ಕೆಲವರು ಜಿಎಸ್ಟಿ ವಿರುದ್ಧ ಎಂದು ಹೇಳುತ್ತಾರೆ. ಇದೆಲ್ಲ ರಾಜಕೀಯ ಷಡ್ಯಂತರದಿಂದ ನಡೆದಿದೆ’ ಎಂದು ಹೇಳಿದರು.

‘ಪೌರತ್ವ ಕಾಯ್ದೆ ತಿದ್ದುಪಡಿಯಿಂದ ದೇಶದ ಮುಸ್ಲಿಂ ಬಾಂಧವರಿಗೆ ಯಾವುದೇ ತೊಂದರೆ ಇಲ್ಲ. ಆದರೂ ಹೋರಾಟ ಏತಕ್ಕೆ ಮಾಡಿದರು ಎಂದು ಗೊತ್ತಾಗುತ್ತಿಲ್ಲ. ಇದರ ಬಗ್ಗೆ ಸಾರ್ವಜನಿರಿಗೆ ಅರಿವು ಮೂಡಿಸುವ ಕೆಲಸ ಸರ್ಕಾರದಿಂದ ಅಗುತ್ತದೆ’ ಎಂದು ತಿಳಿಸಿದರು.

ಅಬಕಾರಿ ಇಲಾಖೆಯಲ್ಲಿ ಬಡ್ತಿ ಸಂಬಂಧ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿ, ‘ಬಡ್ತಿ ವಿಚಾರವನ್ನು ಐಎಎಸ್ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ನನ್ನ ಬಳಿಗೆ ಇನ್ನೂ ಕಡತ ಬಂದಿಲ್ಲ, ಏನಾಗಿದೆ ಎಂಬ ಮಾಹಿತಿಯೂ ಇಲ್ಲ’ ಎಂದರು.

ಡಿ.ಕೆ.ಶಿವಕುಮಾರ್ ಏಸು ಪ್ರತಿಮೆ ಸ್ಥಾಪನೆ ವಿವಾದಕ್ಕೆ ಪ್ರತಿಕ್ರಿಯಿಸಿ, ‘ಪ್ರತಿಮೆ ಸ್ಥಾಪನೆ ಮಾಡಲಿ ಬಿಡಿ ಅದು ಒಳ್ಳೆಯ ಕಾರ್ಯವಲ್ಲವೇ. ನಾನೂ ಸಹ ಚರ್ಚ್‌ಗಳಿಗೆ, ಮಸೀದಿಗಳಿಗೆ ಹೋಗುತ್ತೇನೆ. ಅವರವರ ಭಕ್ತಿ ಅವರದು, ಹಿಂದು ಮುಸ್ಲಿಂ, ಕ್ರೈಸ್ತರೆಲ್ಲರು ಒಂದೇ. ಎಲ್ಲರೂ ಮನುಷ್ಯರೇ ಎಂಬ ಭಾವನೆ ನಮ್ಮಲಿ ಬೆಳೆಯಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT