ಶನಿವಾರ, ಆಗಸ್ಟ್ 13, 2022
28 °C

‘ಎಪಿಎಂಸಿ ಕಮಿಷನ್ ದಂಧೆ ತಡೆಯಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ಎಪಿಎಂಸಿಯಲ್ಲಿ ರೈತರಿಂದ ವಸೂಲಿ ಮಾಡುತ್ತಿರುವ ಕಮಿಷನ್ ದಂಧೆ ತಡೆಯಬೇಕು. ರೈತರಿಗೆ ಮೂಲಸೌಕರ್ಯ ಒದಗಿ ಒದಗಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಸದಸ್ಯರು ಎಪಿಎಂಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಇಲ್ಲಿನ ಎಪಿಎಂಸಿಗೆ ಜಿಲ್ಲೆ ಹಾಗೂ ನೆರೆಯ ಆಂಧ್ರ, ತಮಿಳುನಾಡಿನಿಂದ ರೈತರು ತರಕಾರಿ ತೆಗೆದುಕೊಂಡು ಬರುತ್ತಾರೆ. ಅವರಿಗೆ ತಂಗಲು ಭವನವಿಲ್ಲ. ಕುಡಿಯಲು ನೀರಿಲ್ಲ. ಸಮರ್ಪಕ ಶೌಚಾಲಯ ಸೌಲಭ್ಯವಿಲ್ಲ ಎಂದು ಅವರು ಅರೋಪಿಸಿದರು.

ಇಲ್ಲಿನ ಎಪಿಎಂಸಿಯಲ್ಲಿ ವ್ಯಾಪಾರಿಗಳು ರೈತರಿಂದ ಶೇ 10ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಈ ಬಗ್ಗೆ ಕೇಳುವವರೇ ಇಲ್ಲವಾಗಿದೆ. ಕೂಡಲೆ ಕಮಿಷನ್ ದಂಧೆಗೆ ಕಡಿವಾಣ ಹಾಕಿ, ಮಾರುಕಟ್ಟೆಗೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ರಾಮೇಗೌಡ ಒತ್ತಾಯಿಸಿದರು.

ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಜಿಲ್ಲಾ ಘಟಕದ ಉಪಾಧ್ಯಕ್ಷ ಪಕ್ಷಣ್, ತಾಲ್ಲೂಕು ಅಧ್ಯಕ್ಷ ಗೋಪಿನಾಥ್, ರಘು, ಟಿ.ಕೆ. ಶ್ರೀನಿವಾಸ್, ಸುಮಿತ್ರ, ಸುರೇಶ್‌ರೆಡ್ಡಿ, ಜಯರಾಮಪ್ಪ, ಕೆ.ಪಿ. ನಾರಾಯಣಸ್ವಾಮಿ, ವಿ.ಸ್ವಾಮಿ, ಮುನಿವೆಂಕಟಪ್ಪ, ವೆಂಕಟೇಶ್, ಗೋವಿಂದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.