ವೇಮಗಲ್: ಹಲವು ತಿಂಗಳಿಂದ ಮಳೆಯ ಒಂದೇ ಒಂದು ಹನಿಯನ್ನೂ ಕಾಣದೆ, ಮಳೆಗಾಗಿ ಬಾಯ್ತೆರೆದಿದ್ದ ಭೂಮಿ ಹಾಗೂ ಜನ ಇಂದು ಬಿದ್ದ ಸತತ ಮಳೆಗೆ ಹರ್ಷಗೊಂಡಿದ್ದಾರೆ.

ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ಸುಮಾರು ಮೂರು ತಾಸಿಗೂ ಅಧಿಕ ಕಾಲ ಮಳೆಯಾಗಿದ್ದು, ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದ ಜನರು ವರ್ಷದ ಮೊದಲ ಮಳೆಗೆ ಸಂತಸಗೊಂಡಿದ್ದಾರೆ.

ಪಟ್ಟಣ ಸೇರಿದಂತೆ ಚನ್ನಪ್ಪನಹಳ್ಳಿ, ಕುರುಗಲ್, ನರಸಾಪುರ, ಕ್ಯಾಲನೂರು ಸೇರಿದಂತೆ ಹಲವು ಹಳ್ಳಿಗಳಲ್ಲಿ ಮಳೆಯಾಗಿದೆ. ಜಾನುವಾರುಗಳಿಗೆ ಮೇವಿಲ್ಲದೆ ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರು ಮಳೆ ಕಂಡು ಸಂತಸಗೊಂಡಿದ್ದಾರೆ. ಕೆಲವೆಡೆ ಗುಡುಗು, ಸಿಡಿಲು, ಗಾಳಿ ಸಹಿತ ಮಳೆ ಸುರಿದಿದೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಶುರುವಾದ ಮಳೆ, 4ರವರೆಗೂ ಸುರಿಯುತ್ತಿತ್ತು. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು, ಸಂತೆ ದಿನವಾದ ಬುಧವಾರ ಮಳೆಯಿಂದಾಗಿ ವ್ಯಾಪಾರಕ್ಕೆ ಸ್ವಲ್ಪಮಟ್ಟಿಗೆ ಅಡೆತಡೆಯುಂಟಾಯಿತು.

ಬಿಸಿಲಿನ ತಾಪಕ್ಕೆ ಒಣಗಿದ್ದ ತೋಟಗಾರಿಕಾ ಬೆಳೆಗಳಿಗೆ ಮತ್ತು ಕಾಡು ಮರಗಳಿಗೆ ಜೀವಕಳೆ ಬಂದಂತಾಗಿದೆ. ಪಟ್ಟಣದಾದ್ಯಂತ ಸುರಿದ ಮೊದಲ ಮಳೆಯಿಂದ ಕೇವಲ ಜನತೆಗೆ ಮಾತ್ರವಲ್ಲದೆ ಸಕಲ ಪ್ರಾಣಿ ಪಕ್ಷಿಗಳಿಗೂ ಸಂತಸ ಉಂಟು ಮಾಡಿದೆ. ಹೋಬಳಿಯಾದ್ಯಂತ ಕೆರೆ ಕಟ್ಟೆಗಳು ಬರಿದಾಗಿ ಪ್ರಾಣಿ ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿತ್ತು. ಸುಮಾರು 3 ಗಂಟೆಗೂ ಅಧಿಕ ಕಾಲ ಬಿದ್ದ ಮಳೆಗೆ ಕೆರೆಕಟ್ಟೆಗಳಲ್ಲೂ ನೀರು ಬಂದಂತಾಗಿದೆ.

ಸಮರ್ಪಕ ಚರಂಡಿ ವ್ಯವಸ್ಥೆಗೆ ಒತ್ತಾಯ: ಈ ಮಧ್ಯೆ ಕೇವಲ 3 ಗಂಟೆ ಮಳೆಗೆ ಪಟ್ಟಣದ ಬಸ್ ನಿಲ್ದಾಣದ ಬಳಿ ರಸ್ತೆಯ ಮೇಲೆಲ್ಲಾ ನೀರು ಹರಿಯುತ್ತಿತ್ತು, ಸಮರ್ಪಕವಾಗಿ ಚರಂಡಿ ನಿರ್ಮಿಸದೆ ಇರುವುದರಿಂದ ಸ್ವಲ್ಪ ಮಳೆ ಬಂದರೂ ಸಾಕು, ಇದು ಬಸ್ ನಿಲ್ದಾಣವೇ ಅಥವಾ ಕೆಸರು ಗದ್ದೆಯೇ ಎನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರಯಾಣಿಕರು ನೀರು–ಕೆಸರಿನಲ್ಲಿಯೇ ನಿಂತುಕೊಂಡು ಬಸ್ಸಿಗೆ ಕಾಯಬೇಕು. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಬೇಕು, ಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.