ಶನಿವಾರ, ಅಕ್ಟೋಬರ್ 1, 2022
20 °C

ಕೋಲಾರ: ಜೈಲು ಹಕ್ಕಿಗಳಿಗೆ ರಾಖಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ವಿಶೇಷ ವಾತಾವರಣ ನಿರ್ಮಾಣವಾಗಿತ್ತು. ಜೈಲು ಹಕ್ಕಿಗಳ ಮೊಗದಲ್ಲಿ ಹೊಸ ಹುರುಪು ಕಂಡುಬಂತು. ರಾಖಿ ಕಟ್ಟಿಸಿಕೊಂಡು ಸಿಹಿ ಸವಿದರು, ಹಿತವಚನಗಳಿಗೆ ಕಿವಿಯಾದರು. 

ರಕ್ಷಾ ಬಂಧನ ಪ್ರಯುಕ್ತ ಜಿಲ್ಲಾ ಕಾರಾಗೃಹದಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಪ್ರತಿನಿಧಿಗಳು ವಿಚಾರಣಾಧೀನ ಕೈದಿಗಳಿಗೆ ರಾಖಿ ಕಟ್ಟಿ ಶುಭ ಹಾರೈಸಿದರು. 

ಎಲ್ಲರೂ ಸಾಲಾಗಿ ನಿಂತು ರಾಕಿ ಕಟ್ಟಿಸಿಕೊಂಡರು. ಕೆಲವರು ಕಾಲಿಗೆ ಬಿದ್ದು ನಮಸ್ಕರಿಸಿದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು. ಜೈಲಿನ ಆವರಣದಲ್ಲಿ ಶಾಂತಿಯಿಂದ ಕುಳಿತು ಹಿತವಚನ ಆಲಿಸಿದರು.  

ಕಾರಾಗೃಹದಲ್ಲಿ ಸದ್ಯ 12 ಮಹಿಳೆಯರು ಸೇರಿದಂತೆ  152 ಮಂದಿ ವಿಚಾರಣಾಧೀನ ಕೈದಿಗಳು ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು