ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲದಿಂದ ‘ಇಲಿ ಬಂತು ಇಲಿ': ಶ್ರೀನಿವಾಸಪುರದಲ್ಲಿ ಇನ್ನೂ ಜೀವಂತವಾಗಿದೆ ಇಲಿಗಳ ಬೇಟೆ

Last Updated 13 ಏಪ್ರಿಲ್ 2020, 8:53 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಇಲಿ ಬೇಟೆ ಇನ್ನೂ ಜೀವಂತವಾಗಿದೆ. ಬಿಲ ಅಗೆದು ಇಲಿ ಹಿಡಿದು ತಿನ್ನುವುದು ಯಾವುದೇ ಒಂದು ಸಮುದಾಯಕ್ಕೆ ಮೀಸಲಾಗಿಲ್ಲ. ಬಹುತೇಕ ಮಾಂಸಾಹಾರಿಗಳು ಇಲಿ ಮಾಂಸವೆಂದರೆ ಬಾಯಲ್ಲಿ ನೀರುರಿಸಿಕೊಳ್ಳುತ್ತಾರೆ.

ಇಲಿ ಎಂದರೆ ಮನೆ ಇಲಿಯಲ್ಲ. ಕಾಡು ಮೇಡು ಹೊಲ ಗದ್ದೆಗಳಲ್ಲಿ ವಾಸಿಸುವ ಇಲಿ. ಈ ಇಲಿ ಗಾತ್ರದಲ್ಲಿ ಮನೆ ಇಲಿಗಿಂತ ದೊಡ್ಡದು. ಕೂದಲಿನ ಬಣ್ಣ ಕೆಂಚು. ಕೆಲವು ಇಲಿಗಳಿಗೆ ಬಾಲದ ಮೇಲೆ ಸುಂದರವಾದ ಬಿಳಿ ಕೂದಲು ಇರುತ್ತದೆ. ಇದನ್ನು ಸ್ಥಳೀಯವಾಗಿ ‘ಯಲ್ಲೆಲಕ’ ಎನ್ನುವರು.

ಹಿಂದೆ ಇಲಿ ಬೇಟೆ ಭೋವಿ ಜನಾಂಗಕ್ಕೆ ಮಾತ್ರ ಸೀಮಿತವಾಗಿತ್ತು. ಅವರು ಅನುಭವದಿಂದ ಬಿಲ ಗುರುತಿಸಿ ಸನಿಕೆಯಿಂದ ಅಗೆದು ಹಿಡಿಯುತ್ತಿದ್ದರು. ಇದು ಇಲಿ ಹಿಡಿಯುವ ಒಂದು ವಿಧಾನವಷ್ಟೆ. ಇನ್ನೂ ಹಲವು ವಿಧಾನಗಳಿವೆ. ಇಲಿ ಇರುವ ಬಿಲ ಗುರುತಿಸಿ, ಬಿಲಕ್ಕೆ ನೀರು ಸುರಿಯುವುದು. ಮಡಿಕೆಯಲ್ಲಿ ಬೆರಣಿ ತುಂಬಿ, ಬೆಂಕಿ ಹೊತ್ತಿಸಿ ಬಿಲದೊಳಕ್ಕೆ ಹೊಗೆ ನುಗ್ಗಿಸುವುದು, ಬಿಲದ ಸುತ್ತಲಿನ ಇತರ ಬಿಲ ಹಾಗೂ ಹುತ್ತಗಳನ್ನು ಮುಚ್ಚಿ, ಎಲ್ಲ ಇಲಿಗಳೂ ಒಂದೇ ಬಿಲದೊಳಗೆ ಹೋಗುವಂತೆ ಮಾಡುವುದು. ರಾತ್ರಿ ಹೊತ್ತು ಬ್ಯಾಟರಿ ಬೆಳಕಲ್ಲಿ ಇಲಿಗಳನ್ನು ಹೊಡೆದು ಕೊಲ್ಲುವುದು.

ಇಲಿ ಬೇಟೆಯಲ್ಲಿ ಇಷ್ಟೇ ಜನ ಇರಬೇಕು ಎಂಬ ನಿಯಮವಿಲ್ಲ. ಬೇಟೆಯ ವಿಧಕ್ಕೆ ಅನುಗುಣವಾಗಿ ಒಂದರಿಂದ ಹತ್ತಾರು ಜನ ಇರುಬಹುದು. ಒಬ್ಬರು ಬಿಲ ಅಗೆದರೆ ಉಳಿದವರು ಕೋಲು ಹಿಡಿದು ಕಾಯುತ್ತಾರೆ. ಇಲಿ ಬಿಲದಿಂದ ಹೊರಗೆ ಬಂದರೆ ‘ಇಲಿ ಬಂತು ಇಲಿ’ ಎಂದು ಕೂಗುತ್ತಾ ಕೋಲು ಬೀಸಿ ಕೊಲ್ಲುತ್ತಾರೆ.

ಭೋವಿ ಜನಾಂಗದಿಂದ ಪ್ರಭಾವಿತರಾದ ಇತರ ಮಾಂಸಾಹಾರಿ ಜನಾಂಗದವರು ಇಲಿ ಬೇಟೆಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಬಿಡುವಿನ ವೇಳೆಯಲ್ಲಿ ಇಲಿ ಬೇಟೆಗೆ ಹೋಗುತ್ತಾರೆ. ಸಿಕ್ಕಿದ ಇಲಿಗಳನ್ನು ಸುಟ್ಟು ತಿನ್ನುತ್ತಾರೆ ಅಥವಾ ಸಾಂಬಾರು ತಯಾರಿಸಿ ಮುದ್ದೆಯೊಂದಿಗೆ ಸವಿಯುತ್ತಾರೆ.

ಬಿಲ ಅಗೆಯುವ ಮೊದಲು ಮುಖ್ಯ ಬಿಲದ ಗುಪ್ತ ದ್ವಾರಗಳನ್ನು ಪತ್ತೆ ಹಚ್ಚಿ ಮುಚ್ಚಬೇಕು. ಅನಂತರ ಸನಿಕೆ ಹಿಡಿದು ಬಿಲ ಹೋದಷ್ಟು ದೂರ ಆಳಕ್ಕೆ ಅಗೆಯಬೇಕು. ಶತ್ರುವಿನ ದಿಕ್ಕು ತಪ್ಪಿಸಲು ಇಲಿಗಳು ಬಿಲಕ್ಕೆ ಮಣ್ಣಿನ ಮುದ್ರೆ ಹಾಕುತ್ತವೆ. ಪಳಗಿದ ಬೇಟೆಗಾರನಿಗೆ ಮಾತ್ರ ಅದು ಗೊತ್ತಾಗುತ್ತದೆ. ಹೊಸಬರಾದರೆ ಬಿಲ ತಪ್ಪಿತು ಎಂದು ಅಗೆಯುವುದನ್ನು ಬಿಟ್ಟು ಹೊರಡುತ್ತಾರೆ.

ಬಯಲು ಇಲಿ ಬೇಟೆ ಹೆಚ್ಚಿದ ಪರಿಣಾಮ ಅವುಗಳ ಸಂತತಿ ಕುಸಿಯುತ್ತಿದೆ. ಹಿಂದಿನಷ್ಟು ಬಿಲಗಳು ಇಂದು ಕಂಡುಬರುತ್ತಿಲ್ಲ. ಹಾಗಾಗಿ ಇಲ್ಲಿನ ಇಲಿ ಮಾಂಸ ಪ್ರಿಯರು, ವಾಹನಗಳಲ್ಲಿ ದೂರದ ಪ್ರದೇಶಗಳಿಗೆ ಹೋಗಿ ಇಲಿ ಹಿಡಿಯುವರು. ಇಲಿ ಬೇಟೆಗೆ ಯಾವುದೇ ಅಡ್ಡಿ ಇಲ್ಲದಿರುವುದರಿಂದ, ನಿರಾತಂಕವಾಗಿ ನಡೆಯುತ್ತಿದೆ.

‘ದೇಶದಲ್ಲಿ ಬೆಳೆಯುವ ಕೃಷಿ ಉತ್ಪನ್ನದಲ್ಲಿ ಶೇ 10 ರಿಂದ 15 ರಷ್ಟು ಭಾಗ ಬೆಳೆಯ ವಿವಿಧ ಹಂತಗಳಲ್ಲಿ ಹಾಗೂ ದಾಸ್ತಾನು ಸ್ಥಳದಲ್ಲಿ ಇಲಿಗಳ ಪಾಲಾಗುತ್ತದೆ. ಇಲಿಗಳನ್ನು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT