ಸಾಲ ಮರುಪಾವತಿ ಮಾಡಿ ನಂಬಿಕೆ ಉಳಿಸಿಕೊಳ್ಳಿ

7

ಸಾಲ ಮರುಪಾವತಿ ಮಾಡಿ ನಂಬಿಕೆ ಉಳಿಸಿಕೊಳ್ಳಿ

Published:
Updated:
Deccan Herald

ಕೋಲಾರ: ‘ಬ್ಯಾಂಕಿನಿಂದ ಪಡೆದುಕೊಂಡಿರುವ ಸಾಲವನ್ನು ಮುರುಪಾವತಿ ಮಾಡುವ ಮೂಲಕ ನಂಬಿಕೆ ಉಳಿಸಿಕೊಳ್ಳಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ತಾಲ್ಲೂಕಿನ ವಕ್ಕಲೇರಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್‌ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಸಂಘಗಳಿಗೆ ₨ 1.10 ಕೋಟಿ ಸಾಲ ವಿತರಿಸಿ ಮಾತನಾಡಿ, ‘ಸಹಕಾರಿ ಬ್ಯಾಂಕಿನಿಂದ ಪಡೆದುಕೊಂಡ ಸಾಲವನ್ನು ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಸಾಲ ಮರುಪವಾತಿ ಮಾಡಿ’ ಎಂದು ಸಲಹೆ ನೀಡಿದರು.

‘ಸಹಕಾರಿ ಬ್ಯಾಂಕಿನಲ್ಲಿ ಸಾಲ ಸಿಗುವಷ್ಟು ಸುಲಭವಾಗಿ ನಿಮಗೆ ವಾಣಿಜ್ಯ ಬ್ಯಾಂಕಿನಲ್ಲಿ ಸಾಲ ಸಿಗುವುದಿಲ್ಲ. ಅವರು ಹಾಕುವ ಷರತ್ತುಗಳಿಗೆ ಆಸ್ತಿಯನ್ನು ಬರೆದುಕೊಟ್ಟರು ಸಾಲ ನೀಡುವುದಿಲ್ಲ. ಜನರಿಂದ ಹಣ ಸೂಲಿಗೆ ಮಾಡುತ್ತಾರೆ ಹೊರತು ಕಷ್ಟಕ್ಕೆ ನೆರವಾಗುವುದಿಲ್ಲ’ ಎಂದರು.

‘ಎಸ್‌ಎಫ್‌ಸ್ಸಿಎಸ್ ಹಂತದಿಂದ ಹಂತದಿಂದ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗಳವರೆಗೂ ಕೆಲಸ ಮಾಡಿದ್ದು, ಎಲ್ಲೇ ಹೋದರೂ ಡಿಸಿಸಿ ಬ್ಯಾಂಕ್ ದಿವಾಳಿಯ ಮಾತು ಬರುತ್ತಿದ್ದಂತೆ ಮನಸ್ಸಿಗೆ ನೋವಾಗುತ್ತಿತ್ತು. ಈಗ ಆ ಪರಿಸ್ಥಿತಿಯಿಂದ ಹೊರ ಬಂದು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿರುವುದು ಶ್ಲಾಘನೀಯ’ ಎಂದು ಸಂತಸ ವ್ಯಕ್ತಪಡಿಸಿದರು.

‘ರೈತರು, ಮಹಿಳೆಯರು ಪಡೆದ ಸಾಲವನ್ನು ಸಮರ್ಪವಾಗಿ ಮರುಪಾವತಿ ಮಾಡಬೇಕು. ಬ್ಯಾಂಕಿನ ನಂಬಿಕೆ ಉಳಿಸಿಕೊಳ್ಳಬೇಕು. ಅದೇ ರೀತಿ ಸ್ಥಿತಿವಂತ ರೈತರು ತಮ್ಮ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ಮುಂದಾಗಬೇಕು’ ಎಂದು ತಿಳಿಸಿದರು.

‘ಬ್ಯಾಂಕಿನಿಂದ ಪಡೆದುಕೊಂಡಿರುವ ಸಾಲವನ್ನು ಸರ್ಕಾರಗಳು ಮನ್ನಾ ಮಾಡುತ್ತವೆ ಎಂದು ಕಾಯಬಾರದು. ಇದರಿಂದ ಸಾಲ ಪಾವತಿ ಮಾಡುವುದು ವಿಳಂಭವಾಗುತ್ತದೆ. ಮತ್ತೆ ಸಾಲ ಪಡೆದುಕೊಳ್ಳಲು ಅರ್ಹರಾಗುವುದಿಲ್ಲ’ ಎಂದು ಎಚ್ಚರಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ನಿರ್ದೇಶಕ ಕೆ.ವಿ.ದಯನಂದ್, ಎಸ್‍ಎಫ್‌ಎಸ್ಸಿಎಸ್ ಅಧ್ಯಕ್ಷ ಆನಂದ್, ನಿರ್ದೇಶಕರಾದ ಚಂದ್ರೇಗೌಡ, ಮುಖಂಡರಾದ ವೆಂಕಟೇಶಪ್ಪ, ಯಶೋಧಮ್ಮ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !