ಬೆಳೆ ವಿಮೆ ನೋಂದಣಿಗೆ ಮನವಿ

7

ಬೆಳೆ ವಿಮೆ ನೋಂದಣಿಗೆ ಮನವಿ

Published:
Updated:

ಕೋಲಾರ: ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಮಳೆಯಾಶ್ರಿತ ರಾಗಿ ಬೆಳೆ ವಿಮೆ ನೋಂದಣಿಗೆ ಆ.14 ಕಡೆ ದಿನ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ರಂಗಸ್ವಾಮಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರೈತರು ಬೆಳೆ ವಿಮೆ ಮಾಡಿಸಿದರೆ ಬೆಳೆ ನಷ್ಟದ ಸಂದರ್ಭದಲ್ಲಿ ಪರಿಹಾರ ಸಿಗುತ್ತದೆ. ಒಂದು ಎಕರೆ ರಾಗಿಗೆ ₹ 308 ವಿಮಾ ಕಂತು ನಿಗದಿಪಡಿಸಲಾಗಿದೆ. ನೈಸರ್ಗಿಕ ವಿಕೋಪದಿಂದ ಬೆಳೆ ನಷ್ಟವಾದರೆ ಇಳುವರಿ ಅನುಸಾರ ವಿಮೆ ಹಣ ಪಾವತಿಸಲಾಗುತ್ತದೆ’ ಎಂದು ಹೇಳಿದರು.

‘ತಾಲ್ಲೂಕಿನ ರೈತರು ತಮ್ಮ ಗ್ರಾಮಗಳ ವ್ಯಾಪ್ತಿಯ ಬ್ಯಾಂಕ್‌ಗಳಲ್ಲೇ ಬೆಳೆ ವಿಮಾ ಕಂತು ಕಟ್ಟಬೇಕು. ಅಕ್ಕಪಕ್ಕದ ಬೇರೆ ಗ್ರಾಮದ ಬ್ಯಾಂಕ್‌ಗಳಲ್ಲಿ ಕಂತು ಕಟ್ಟಿದರೆ ಬೆಳೆ ಪರಿಹಾರ ಸಿಗುವುದಿಲ್ಲ. ರೈತರ ನೋಂದಣಿಗೆ ಆಧಾರ್‌ ಸಂಖ್ಯೆ, ಬ್ಯಾಂಕ್‌ ಪಾಸ್‌ಬುಕ್‌, ಜಮೀನಿನ ಪಹಣಿ ಮತ್ತು ಭಾವಚಿತ್ರ ಅಗತ್ಯ’ ಎಂದು ವಿವರಿಸಿದರು.

‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ರಾಗಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಈಗಾಗಲೇ ರಾಗಿ ಬಿತ್ತನೆ ಮಾಡಿರುವವರು ಮತ್ತು ಆ.14ರೊಳಗೆ ಬಿತ್ತನೆ ಮಾಡಲು ಉದ್ದೇಶಿಸಿರುವವರು ಬೆಳೆ ವಿಮೆ ಮಾಡಿಸಬಹುದು. ರೈತರು ಯೋಜನೆಯ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !