ವಿದ್ಯುತ್ ತಂತಿ ತೆರವಿಗೆ ಆಗ್ರಹ

ಮಾಲೂರು: ಮನೆಗಳ ಮೇಲೆ ಹಾದು ಹೋಗಿರುವ 11 ಕೆ.ವಿ ವಿದ್ಯುತ್ ತಂತಿಗಳಿಂದ ಭಯಭೀತರಾಗಿರುವ ತಾಲ್ಲೂಕಿನ ಸಂತೆಹಳ್ಳಿ ಗ್ರಾ.ಪಂ. ವ್ಯಾಪ್ತಿಯ ದ್ಯಾಪಸಂದ್ರ ಗ್ರಾಮದ ನಾಗರಿಕರು ತೆರವುಗೊಳಿಸುವಂತೆ ಬೆಸ್ಕಾಂ ಇಲಾಖೆಗೆ ಒತ್ತಾಯಿಸಿದ್ದಾರೆ.
ಗ್ರಾಮದ ನಿವಾಸಿಗಳಾದ ಆಂಜನಪ್ಪ, ಮುನಿರಾಜು ಅವರ ಸುತ್ತಮುತ್ತಲಿನ ಮನೆಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿದೆ. ಆಶ್ರಯ ಯೋಜನೆಯಡಿ ನೀಡಿರುವ ಉಚಿತ ನಿವೇಶನಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸವಾಗಿದ್ದಾರೆ. ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ಆತಂಕಗೊಂಡಿದ್ದಾರೆ.
‘ತಂತಿಗಳು ಕೈಗೆಟುಕುವ ಅಂತರದಲ್ಲಿವೆ. ಇದರಿಂದ ಮನೆಯ ಮಹಡಿ ಮೇಲೆ ಹತ್ತಲು ಭಯಭೀತರಾಗಿದ್ದಾರೆ. ಇತ್ತೀಚೆಗೆ ಬಿದ್ದ ಮಳೆಯಿಂದ ಮನೆಯೊಂದರ ಸುತ್ತಮುತ್ತ ವಿದ್ಯುತ್ ಪ್ರವಹಿಸಿದ ಅನುಭವವಾಗಿದ್ದು, ಮಳೆ ಸ್ಥಗಿತಗೊಳ್ಳುವವರೆಗೂ ಮನೆಗಳನ್ನು ಬಿಟ್ಟು ಬೇರೆಡೆ ಹೋಗಿ ವಾಸ್ತವ್ಯ ಹೂಡಿದ್ದೇವು’ ಎಂದು ಆಂಜಿನಪ್ಪ ಮತ್ತು ಮುನಿರಾಜು ಕುಟುಂಬದ ಸದಸ್ಯರು ಅಳಲು ತೋಡಿಕೊಂಡರು.
ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.