ಭಾನುವಾರ, ಏಪ್ರಿಲ್ 18, 2021
24 °C

ನೀರಿನ ಟ್ಯಾಂಕರ್ ದರಪಟ್ಟಿ ಕೋರಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಿಲು: ಬೇಸಿಗೆ ಪ್ರಯುಕ್ತ ನಗರಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅವಶ್ಯಕತೆ ಬಂದರೆ ನೀರು ಸರಬರಾಜು ಮಾಡಲು ಆಸಕ್ತರಿಂದ ದರಪಟ್ಟಿ ಆಹ್ವಾನಿಸಲಾಗಿದೆ ಎಂದು ತಹಶೀಲ್ದಾರ್ ಕೆ.ಎನ್. ರಾಜಶೇಖರ್ ತಿಳಿಸಿದ್ದಾರೆ.

ಕುಡಿಯುವ ನೀರಿನ ಮೂಲದಿಂದ 5 ಕಿ.ಮೀ ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ 5000 ಲೀಟರ್ ಟ್ಯಾಂಕರ್‌ಗೆ ಪ್ರತಿ ಟ್ರಿಪ್‌ಗೆ ₹ 550 ಹಾಗೂ ಕುಡಿಯುವ ನೀರಿನ ಮೂಲದಿಂದ 5000 ಲೀಟರ್ ಸಾಮರ್ಥ್ಯದ ಪ್ರತಿ ಟ್ರಿಪ್‌ಗೆ ₹ 600 ಬೆಲೆ ನಿಗದಿಪಡಿಸಿ ದರಪಟ್ಟಿ ಆಹ್ವಾನಿಸಲಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ಆಸಕ್ತರು ದರಪಟ್ಟಿ ಸಲ್ಲಿಸಬಹುದಾಗಿದೆ.

5000 ಲೀಟರ್ ಸಾಮರ್ಥ್ಯವುಳ್ಳ ಹಾಗೂ ಕಡ್ಡಾಯವಾಗಿ ಜಿಪಿಎಸ್ ಹೊಂದಿದ ಟ್ಯಾಂಕರ್‌ ಜೋಡಿಸಿರುವ ಟ್ಯಾಂಕರ್‌ಗಳಿಂದ ಕುಡಿಯುವ ನೀರು ಸರಬರಾಜು ಮಾಡಬೇಕು. ಶುದ್ಧ ಕುಡಿಯುವ ನೀರನ್ನು ಮಾತ್ರ ಸರಬರಾಜು ಮಾಡಬೇಕು. ಸರಬರಾಜು ಮಾಡುವ ಕುಡಿಯುವ ನೀರು ಯೋಗ್ಯವಾಗಿದೆಯೇ ಎಂಬುದರ ಬಗ್ಗೆ ದೃಢೀಕರಣ ಪತ್ರ ಸಲ್ಲಿಸಬೇಕು. ತಾಲ್ಲೂಕು ಟಾಸ್ಕ್‌ಪೋರ್ಸ್‌ ಸಮಿತಿಯವರು ಕಾಲಕಾಲಕ್ಕೆ ವಿಧಿಸುವ ಷರತ್ತುಗಳಿಗೆ ಮತ್ತು ನಿಬಂಧನೆಗಳಿಗೆ ಬದ್ಧವಾಗಿರಬೇಕು. ಈ ಕುರಿತು ಮುಚ್ಚಳಿಕೆ ಪತ್ರ ಬರೆದುಕೊಡಬೇಕು ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು