ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಡ್‌ ನಿರ್ಮಾಣಕ್ಕೆ ₹ 2.85 ಲಕ್ಷ : ರೂಪಶ್ರೀ ಭರವಸೆ

ಅರಾಭಿಕೊತ್ತನೂರು ಶಾಲೆಗೆ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಭೇಟಿ
Last Updated 31 ಆಗಸ್ಟ್ 2018, 16:04 IST
ಅಕ್ಷರ ಗಾತ್ರ

ಕೋಲಾರ: ‘ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ರಂಗಮಂದಿರದ ಮುಂಭಾಗ ಶೆಡ್ ನಿರ್ಮಾಣಕ್ಕೆ ₹ 2.85 ಲಕ್ಷ ಬಿಡುಗಡೆ ಮಾಡುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಶ್ರೀ ಭರವಸೆ ನೀಡಿದರು.

ಶಾಲೆಗೆ ಶುಕ್ರವಾರ ಭೇಟಿ ನೀಡಿದ ಅವರಿಗೆ ಶಿಕ್ಷಕರು, ‘ಮಳೆಗಾಲದಲ್ಲಿ ಬೆಟ್ಟದಿಂದ ಜೌಗು ನೀರು ಶಾಲೆಯ ಕಡೆಗೆ ಹರಿದು ಬರುತ್ತದೆ. ಆ ನೀರು ಶಾಲೆ ಆವರಣದಲ್ಲಿ ನಿಂತು ಸಮಸ್ಯೆಯಾಗುತ್ತಿದೆ. ಶೆಡ್‌ ನಿರ್ಮಿಸಿದರೆ ಸಮಸ್ಯೆ ಬಗೆಹರಿಯುತ್ತದೆ’ ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ರೂಪಶ್ರೀ, ‘ರಂಗಮಂದಿರ ಮುಂಭಾಗದಲ್ಲಿ ಮಕ್ಕಳಿಗೆ ಕೂರಲು ಅನುಕೂಲವಾಗುವಂತೆ ಶೆಡ್‌ ನಿರ್ಮಾಣ ಮಾಡಬೇಕು. ಈ ಕೆಲಸ ಆದಷ್ಟು ಬೇಗನೆ ಆಗಬೇಕು. ಶೆಡ್‌ನ ನೆಲಕ್ಕೆ ಕಾಂಕ್ರೀಟ್‌ ಹಾಕಿಸುತ್ತೇವೆ. ಶಾಲೆಯ ಸಮಗ್ರ ಅಭಿವೃದ್ದಿಗೆ ಎಲ್ಲಾ ನೆರವು ನೀಡುತ್ತೇವೆ’ ಎಂದು ತಿಳಿಸಿದರು.

ದಾಖಲಾತಿ ಹೆಚ್ಚುತ್ತಿದೆ: ‘ಗ್ರಾಮೀಣ ಪ್ರದೇಶದ ಈ ಪ್ರೌಢಶಾಲೆಯು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಮಾದರಿ ಶಾಲೆಯಾಗಿ ಹೊರಹೊಮ್ಮುತ್ತಿದೆ. ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಹೆಚ್ಚುತ್ತಿದೆ. ಜತೆಗೆ ಇಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದರ ಜತೆಗೆ ಅಡುಗೆಗೂ ಶುದ್ಧ ನೀರು ಬಳಸುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ರಾಜ್ಯದೆಲ್ಲೆಡೆ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತವು ಆತಂಕ ಸೃಷ್ಟಿಸಿದ್ದರೆ ಈ ಶಾಲೆಗೆ ಹಿಂದಿನ ಶೈಕ್ಷಣಿಕ ವರ್ಷಕ್ಕಿಂತ 28 ಮಕ್ಕಳು ಹೆಚ್ಚಾಗಿ ದಾಖಲಾಗಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

ಹೆಚ್ಚುವರಿ ಕೊಠಡಿ: ‘ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ ಇರುವುದರಿಂದ ಹೆಚ್ಚುವರಿ ಕೊಠಡಿಯ ಅಗತ್ಯವಿದೆ’ ಎಂದು ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಹೇಳಿದರು.

ರೂಪಶ್ರೀ ವಿಜ್ಞಾನ ಪ್ರಯೋಗಾಲಯ, ಬಿಸಿಯೂಟದ ಅಡುಗೆ ಮನೆ ಮತ್ತು ಸ್ಮಾರ್ಟ್ ಕ್ಲಾಸ್ ಕೊಠಡಿ ಪರಿಶೀಲಿಸಿದರು. ಎಸ್‌ಡಿಎಂಸಿ ಸದಸ್ಯ ಮಂಜುನಾಥ್, ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಸತೀಶ್ ಎಸ್.ನ್ಯಾಮತಿ, ಶ್ರೀನಿವಾಸಲು, ಭವಾನಿ, ನಾರಾಯಣಸ್ವಾಮಿ, ಸುಗುಣಾ, ಶ್ವೇತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT