ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ.23ರಿಂದ ಶ್ರೀರಾಮಾಯಣ ದರ್ಶನಂ ದಾರ್ಶನಿಕ ಸಂದೇಶ ಅಭಿಯಾನ

Last Updated 21 ಏಪ್ರಿಲ್ 2019, 10:51 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಏ.23ರಿಂದ ಮೇ 14ರವರೆಗೆ ಹಮ್ಮಿಕೊಂಡಿರುವ ಶ್ರೀರಾಮಾಯಣ ದರ್ಶನಂ ದಾರ್ಶನಿಕ ಸಂದೇಶದ ಅಭಿಯಾನಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಕೋರಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗುತ್ತಿದ್ದು, ಪ್ರತಿ ಶಾಲಾ ಕಾಲೇಜಿನಲ್ಲೂ ಕಾರ್ಯಕ್ರಮ ನಡೆಸಲು ಚಿಂತಿಸಲಾಗಿದೆ’ ಎಂದರು.

‘ಮೇ 5ರಂದು ಪರಿಷತ್‌ನ ಸಂಸ್ಥಾಪನಾ ದಿನವನ್ನು ಎಲ್ಲ ಘಟಕಗಳಲ್ಲೂ ಅದೇ ದಿನ ಆಚರಿಸುವಂತೆ ಕೇಂದ್ರ ಸಮಿತಿ ಸ್ಪಷ್ಟ ನಿರ್ದೇಶನ ನೀಡಿದೆ. ಅಂದು ಪರಿಷತ್ತಿನ ಕುರಿತು ಉಪನ್ಯಾಸ, ಎರಡ್ಮೂರು ಮಂದಿ ಯುವ ಸಾಹಿತಿ, ಬರಹಗಾರರನ್ನು ಗುರುತಿ ಸನ್ಮಾನಿಸುವುದು, ಮಹಿಳೆಯರಿಗೂ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಾದ್ಯಂತ ಜೂ.15ರೊಳಗೆ ಎಲ್ಲ ತಾಲ್ಲೂಕು ಸಮ್ಮೇಳನ ನಡಸಬೇಕು. 5ನೇ ಕೋಲಾರ ತಾಲ್ಲೂಕು ಸಮ್ಮೇಳನವನ್ನು ಜೂ.7ರಂದು ನಡೆಸಲು ಸಿದ್ದಕೈಗೊಳ್ಳಲಾಗುತ್ತಿದ್ದು, ತಾಲೂಕು ಸಮ್ಮೇಳನಾಧ್ಯಕ್ಷರನ್ನಾಗಿ ಸಾಹಿತಿ ಕಾಮರೂಪಿ ಎಂ.ಎಸ್.ಪ್ರಭಾಕರ್ ಅವರನ್ನು ಆಯ್ಕೆ ಮಾಡಲಾಗುವುದು, ಒಪ್ಪದಿದ್ದಲ್ಲಿ ನಿವೃತ್ತ ಉಪನ್ಯಾಸಕಿ ಜಯಶ್ರೀ ಅವರನ್ನು ಆಯ್ಕೆ ಮಾಡಲಾಗುವುದು’ ಎಂದು ಹೇಳಿದರು.

‘ಮುಳಬಾಗಿಲು ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲಿ ಸಮ್ಮೇಳನ ನಡೆದು ನಗರ ಸಮ್ಮೇಳನ ನಡೆಸಲು ತಾಲ್ಲೂಕು ಘಟಕ ಮುಂದೆ ಬಂದಿದೆ. ಉಳಿದ ತಾಲ್ಲೂಕುಗಳಲ್ಲೂ ಸಮ್ಮೇಳನ ನಡೆಸಲು ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯದಲ್ಲೇ ಪ್ರಥಮ ಬಾರಿಗೆ ದಲಿತ ಸಾಹಿತ್ಯ ಸಮ್ಮೇಳನವನ್ನು ಜೂನ್ ಅಂತ್ಯದೊಳಗೆ ಕೋಲಾರದಲ್ಲಿ ನಡೆಸಲು ತೀರ್ಮಾನಿಸಿದೆ. ಕನ್ನಡ ಸಾಹಿತ್ಯ ಪರಿಷತ್‌ನ ದಲಿತ ಸಾಹಿತ್ಯವನ್ನು ಒಟ್ಟುಗೂಡಿಸುವುದು ಸಮ್ಮೇಳನದ ಉದ್ದೇಶ’ ಎಂದು ವಿವರಿಸಿದರು.

‘ದಲಿತ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ 10 ಸಂಪುಟಗಳನ್ನು ಸಿದ್ದಪಡಿಸುವ ಕಾರ್ಯಕ್ಕೆ ಕೈಹಾಕಿದೆ. 5 ಸಂಪುಟಗಳ ರಚನೆ ಮುಗಿಯುತ್ತಿದ್ದಂತೆಯೇ ಸಮ್ಮೇಳನ ನಡೆಸುವುದಾಗಿ ರಾಜ್ಯ ಘಟಕದ ಅಧ್ಯಕ್ಷರು ಮಾಹಿತಿ ನೀಡಿದ್ದು, ಜೂನ್ ಅಂತ್ಯದೊಳಗೆ ಕೋಲಾರದಲ್ಲಿ ನಡೆಸಲು ಉದ್ದೇಶಿಸಿ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಮ್ಮೇಳನದಲ್ಲಿ 5 ಸಂಪುಟಗಳು ಬಿಡುಡೆಗೊಳ್ಳಲಿದೆ’ ಎಂದು ಹೇಳಿದರು.

‘ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಸಮ್ಮೇಳನ ನಡೆಸಲಾಗುವುದು. ಎರಡು ದಿನಗಳ ಸಮ್ಮೇಳನಕ್ಕೆ ರಾಜ್ಯ ಸೇರಿದಂತೆ ದೇಶದ ಇತರೆಡೆಯಿಂದ 400ರಿಂದ 500ಕ್ಕೂ ಹೆಚ್ಚು ಪ್ರತಿನಿಧಿಗಳು, ದಲಿತ ಸಾಹಿತಿಗಳು ಉಪನ್ಯಾಸ, ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಿಗೆ ಸುಮಾರು 150 ಕೊಠಡಿಗಳ ಅವಶ್ಯವಿದೆ. ಸಮ್ಮೇಳನದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಹೊರಗಡೆ ಎಲ್‍ಇಡಿ ಪರದೆ ವ್ಯವಸ್ಥೆ ಮಾಡಬೇಕಿದೆ’ ಎಂದರು.

ಪರಿಷತ್‌ನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳಾದ ಆರ್.ಅಶ್ವಥ್, ಆರ್.ಎಂ. ವೆಂಟಸ್ವಾಮಿ, ಗೌರವ ಕೋಶಾಧ್ಯಕ್ಷ ರತ್ನಪ್ಪ ಮೇಲಾಗಾಣಿ, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಕೋಲಾರ ಪ್ರೊ.ಎಂ. ಮುನಿರತ್ನಪ್ಪ, ಮುಳಬಾಗಿಲು ಜಯರಾಮರೆಡ್ಡಿ, ಮಾಲೂರು ದಾ.ಮು,.ವೆಂಕಟೇಶ್, ಸಮಿತಿ ಸದಸ್ಯೆ ಕೋಮುಲ ಸುಮಿತ್ರ ಕುಮಾರಿ, ನಗರಾಧ್ಯಕ್ಷ ಬಿ.ಶಿವಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT