ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಕ್ಕೇರಿದ ನಾಟಿ ಕೋಳಿ ಬೆಲೆ

Last Updated 23 ಏಪ್ರಿಲ್ 2020, 9:32 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಬದಲಾದ ಪರಿಸ್ಥಿತಿಯಲ್ಲಿ ನಾಟಿ ಕೋಳಿ ಬೆಲೆ ಗಗನಕ್ಕೇರಿದೆ. ಇದು ಮಾಂಸ ಪ್ರಿಯರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

ಗ್ರಾಮೀಣ ಪ್ರದೇಶದ ಜನ ನಗರ ಅಥವಾ ಪಟ್ಟಣಗಳತ್ತ ಸುಳಿಯುತ್ತಿಲ್ಲ. ಸ್ಥಳೀಯವಾಗಿ ದೊರೆಯುವ ಹಣ್ಣು, ತರಕಾರಿ ಸೇವನೆ ಹಾಗೂ ಮಾಂಸದ ಅಡುಗೆಗೆ ಮುಂದಾಗಿದ್ದಾರೆ. ಹಕ್ಕಿ ಜ್ವರದ ಭಯದಿಂದ ಫಾರಂ ಕೋಳಿ ನಾಶಪಡಿಸಿದ ಮೇಲೆ ಉತ್ತಮ ಗುಣಮಟ್ಟದ ಬಾಯ್ಲರ್‌ ಕೋಳಿ ಸಿಗುತ್ತಿಲ್ಲ. ಹಾಗಾಗಿ ನಾಟಿ ಕೋಳಿಗೆ ಮಣೆ ಹಾಕಲಾಗಿದೆ.

ಈ ಹಿಂದೆ ಒಂದು ಕೆ.ಜಿ. ಜೀವಂತ ನಾಟಿ ಕೋಳಿ ಬೆಲೆ ₹250 ರಿಂದ ₹300 ಇತ್ತು. ಈಗ ಅದೇ ತೂಕ ₹500ರ ಗಡಿದಾಟಿದೆ. ‘ಒಂದು ಕೆಜಿ ಜೀವಂತ ಕೋಳಿಯನ್ನು ಕೊಯ್ದು ಸ್ವಚ್ಛಗೊಳಿಸಿದರೆ 700 ಗ್ರಾಂ. ಮಾಂಸ ಸಿಗುತ್ತದೆ. ಈಗ ಕೋಳಿ ಬೆಲೆ ಹೆಚ್ಚೆನಿಸುತ್ತದೆ. ಆದರೇನು ಮಾಡುವುದು ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ‘ ಎನ್ನುತ್ತಾರೆ ರೈತ ನಾರಾಯಣಸ್ವಾಮಿ.

ಗ್ರಾಮೀಣ ಪ್ರದೇಶದಲ್ಲಿ ನಾಟಿ ಕೋಳಿ ಸಾಕಲಾಗಿದೆ. ಈ ಮಧ್ಯೆ ಬೇಡಿಕೆ ಹೆಚ್ಚಿದ ಪರಿಣಾಮವಾಗಿ ಬಹಳಷ್ಟು ಕೋಳಿಗಳು ಖಾಲಿಯಾಗಿವೆ. ಅಲ್ಲಲ್ಲಿ ನಾಟಿ ಕೋಳಿ ಫಾರಂಗಳು ತಲೆಯೆತ್ತಿವೆ. ಅಲ್ಲೂ ಸಹ ಕೋಳಿ ಸಿಗುತ್ತಿಲ್ಲ ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತಿದೆ.

ಇನ್ನು ಹುಂಜಗಳ ಬೆಲೆಯನ್ನು ಕೇಳಿ ಮೂಗಿನ ಮೇಲೆ ಬೆರಳಿಡುವರೇ ಹೆಚ್ಚು. ಪಂದ್ಯದ ಹುಂಜಗಳು ₹3000 ದಿಂದ ₹6000ರವರೆಗೆ ಮಾರಾಟವಾಗುತ್ತಿವೆ. ಇಂಥ ಹುಂಜಗಳನ್ನು ಕೆಲವು ವಿಶೇಷವಾಗಿ ಸಾಕುತ್ತಾರೆ. ಕಡಕ್‌ನಾಥ್‌ ತಳಿ ಕೋಳಿಗೆ ಬೇಡಿಕೆ ಇದೆಯಾದರೂ, ಜನಸಾಮಾನ್ಯರು ಕೊಂಡು ತಿನ್ನಲಾಗದಷ್ಟು ಬೆಲೆಗೆ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT