ಶ್ರೀನಿವಾಸಪುರ: ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಶ್ರೀನಿವಾಸಪುರ ತಾಲ್ಲೂಕು 2025-26 ನೇ ಸಾಲಿನಲ್ಲಿಯೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಉಳಿಸಿಕೊಂದೆ.

ತಾಲ್ಲೂಕಿನಲ್ಲಿ 2,488 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 2,454 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಶೇ 98.63 ಫಲಿತಾಂಶ ಬಂದಿದ್ದು, ತಾಲ್ಲೂಕುವಾರು ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿದೆ.

ಈ ಸಾಧನೆಗೆ ನೋಡಲ್ ಅಧಿಕಾರಿ ಎನ್.ವಿ.ಲಕ್ಷ್ಮಿನಾರಾಯಣ, ತಾಲ್ಲೂಕಿನ ಶಿಕ್ಷಕರ, ಸಿಬ್ಬಂದಿ ಕಾರಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಮುನಿಲಕ್ಷ್ಮಯ್ಯ ತಿಳಿಸಿದರು.

ತಾಲ್ಲೂಕಿನ ಒಟ್ಟು 69 ಪ್ರೌಢಶಾಲೆಗಳಲ್ಲಿ ಸರ್ಕಾರಿ 31, ಅನುದಾನಿತ 7, ಅನುದಾನ ರಹಿತ 31 ಶಾಲೆಗಳು ಇವೆ. ಸರ್ಕಾರಿ 22, ಅನುದಾನಿತ 3, ಅನುದಾನ ರಹಿತ 49 ಶಾಲೆಗಳು ಶೇ 100ರಷ್ಟು ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.

ರಾಯಲ್ಪಾಡಿನ ಸಿ.ಎಸ್.ವಿಶ್ವನಾಥ ಶಾಸ್ತ್ರಿ, ಕುಸುಮಾ ದಂಪತಿ ಪುತ್ರಿ ಸಿ.ವಿ.ಅನಘಾ 603 (ಶೇ 96.48) ಅಂಕ ಪಡೆದಿದ್ದಾರೆ. ಅವರು ಬೈರವೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಓದಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-18-580939683

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.