ಶ್ರೀನಿವಾಸಪುರ: ಜಿಲ್ಲಾ ಕಾಂಗ್ರೆಸ್ನ ನೂತನ ಕಾರ್ಯಾಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ ನೇತೃತ್ವದಲ್ಲಿ ತಾಲ್ಲೂಕಿನ ಕೆಲವು ಕಾಂಗ್ರೆಸ್ ಮುಖಂಡರು ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿಯಾಗಿ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಬೆಂಬಲಿಗರೂ ಆಗಿರುವ ಈ ಮುಖಂಡರು, ಮುನಿಯಪ್ಪ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲಕಾರಿ ಬೆಳವಣಿಗೆ ಆಗಿದೆ.

ತಮ್ಮನ್ನು ಭೇಟಿಯಾದ ಈ ಮುಖಂಡರನ್ನು ಸಚಿವರು ಗೌರವದಿಂದ ಸ್ವಾಗತಿಸಿ ಮಾತನಾಡಿದ್ದಾರೆ. ಆದರೆ, ರಾಜಕೀಯ ವಿಷಯ ತೆಗೆಯುತ್ತಿದಂತೆ ಸಚಿವರು ತುಸು ಬೇಸರಗೊಂಡಂತೆ ಕಂಡುಬಂದಿದ್ದಾರೆ.

ಮ್ಯಾಕಲ ನಾರಾಯಣಸ್ವಾಮಿ ಅವರನ್ನು ಉದ್ದೇಶಿಸಿ ಮಾತನಾಡಿದ ಮುನಿಯುಪ್ಪ, ‘ಹಿಂದೆ ತಾವು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಬೇಕಾಗಿತ್ತು. ಅದು ತಪ್ಪಿದ್ದು ಏಕೆ ಎಂಬ ಅರಿವಿದೆಯೇ? ಈಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿದ್ದೀರಿ. ಇದೆಲ್ಲವೂ ತಮಗೆ ಅರ್ಥವಾಗಲಿ’ ಎಂದು ಹೇಳಿದರು ಎಂಬುದಾಗಿ ತಿಳಿದು ಬಂದಿದೆ.

ಕೋಮುಲ್ ನಿರ್ದೇಶಕ ಕೆ.ಕೆ.ಮಜುನಾಥರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ಭಾಸ್ಕರ್, ಮಾಜಿ ಸದಸ್ಯ ಶೋರೂಂ ನಾರಾಯಣಸ್ವಾಮಿ, ಕೊರಿಗೇಪಲ್ಲಿ ಗಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥರೆಡ್ಡಿ ಈ ಸಂದರ್ಭದಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.