ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹೋರಾಟ ರೂಪಿಸಿ

ಬಹುಜನ ಸಂಘ ಸಮಾವೇಶದಲ್ಲಿ ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ಸಲಹೆ
Last Updated 10 ಫೆಬ್ರುವರಿ 2019, 16:03 IST
ಅಕ್ಷರ ಗಾತ್ರ

ಕೋಲಾರ: ‘ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹೋರಾಟಗಳನ್ನು ಸಂಘಟನೆಗಳು ರೂಪಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಸಲಹೆ ನೀಡಿದರು.

ಕರ್ನಾಟಕ ಬಹುಜನ ಸಂಘದಿಂದ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ 4ನೇ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಸಂಘಟನೆಗಳ ಹೋರಾಟದ ಹಾದಿ ತಪ್ಪುತ್ತಿದೆ. ಇದರಿಂದ ಜನಕ್ಕೂ ನಂಬಿಕೆ ಇಲ್ಲದಂತಾಗಿದೆ’ ಎಂದರು.

‘ಅಂಬೇಡ್ಕರ್, ಜ್ಯೋತಿ ಬಾಯಿಪುಲೆ, ಟಿಪ್ಪು ಸುಲ್ತಾನ್ ತಮ್ಮವರಿಗಾಗಿ ಬದುಕಲಿಲ್ಲ. ಇನ್ನಿತರರು ಸಮಾಜದ ಬಗ್ಗೆ ಚಿಂತಿಸಿರದಿದ್ದರೆ ಚರಿತ್ರೆಯಲ್ಲಿ ಅವರ ಹೆಸರು ಉಳಿಯುತ್ತಿರಲಿಲ್ಲ. ಸಮಾಜ ಸುಧಾರಣೆಗೆ ಅವರು ಪಟ್ಟ ಶ್ರಮದಿಂದ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಕಲಿಯುಗದಲ್ಲಿ ಸೂರ್ಯ ಚಂದ್ರರು ಇರುವ ತನಕ ಇವರ ಹೆಸರು ದೇವರ ಸ್ಥಾನದಲ್ಲಿ ಉಳಿಯುತ್ತಿದೆ’ ಎಂದು ತಿಳಿಸಿದರು.

‘ಉಳ್ಳವರು ಬಡ ಜನರ ಸಮಸ್ಯೆಗಳ ಬಗ್ಗೆ ಅಥವಾ ವ್ಯವಹಾರಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ಸೀಮಿತರಾಗಿರುತ್ತರೆಯೇ ವಿನಃ ಬಡವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬಡವರು ಸಮಾಜಕ್ಕೆ ನಮ್ಮಿಂದ ಒಳಿತಾಗಬೇಕೆಂದು ಬಯಸಿ ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ’ ಎಂದರು.

‘ತಾಲ್ಲೂಕಿನಲ್ಲಿ 1,250 ಮಂದಿ ನಿವೇಶನ ರಹಿತ ಫಲಾನುಭವಿಗಳ ಪಟ್ಟಿ ಮಾಡಿದ್ದು, ಸರ್ವೇ ನಂ ಇರುವ ಜಾಗವನ್ನು ಗುರುತಿಸಿ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಸತಿ ರಹಿತ 480 ಫಲಾನುಭವಿಗಳಿಗೆ ಮುಂದಿನ ತಿಂಗಳಿನಿಂದ ವಸತಿ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗುವುದು’ ಎಂದು ಹೇಳಿದರು.

‘ಅಸಂಘಟಿತ ಕಾರ್ಮಿಕರಿಗಾಗಿ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಾಕಷ್ಟು ಅನುದಾನ ಇದ್ದರು ಬಳಕೆ ಆಗುತ್ತಿಲ್ಲ. ಅಸಂಘಟಿತ ಕಾರ್ಮಿಕರ ಪಟ್ಟಿ ನೀಡಿದರೆ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅರ್ಹರಿಗೆ ಸೌಕರ್ಯ ಕಲ್ಪಿಸಲು ಕ್ರಮಕಗೊಳ್ಳಲಾಗುವುದು’ ಎಂದು ಭರವಸೆ ನಿಡಿದರು.

ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಮಾತನಾಡಿ, ‘ಎಲ್ಲಾ ಕ್ಷೇತ್ರಗಳಲ್ಲೂ ಶೋಷಿತ ಸಮುದಾಯಗಳು ಹಿಂದುಳಿದಿವೆ. ಇದಕ್ಕೆ ಸರ್ಕಾರದ ಸೌಕರ್ಯಗಳೇ ಕರಣವಾಗಿದೆ’ ಎಂದು ವಿಷಾದಿಸಿದರು.

‘ಶೋಷಿತ ಸಮುದಾಯದವರಿಗೆ ಸಾಲ, ಶಿಕ್ಷಣ ದೊರೆತಾಗ ಮಾತ್ರ ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಸಮುದಾಯಕ್ಕೆ ಬೇಕಾದ ಸೌಕರ್ಯ ಪಡೆದುಕೊಳ್ಳಲು ಹೋರಾಟ ನಡೆಸಬೇಕು’ ಎಂದು ಸಲಹೆ ನೀಡಿದರು.

ದಲಿತ ಮುಖಂಡ ರಾಜಪ್ಪ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆ ರೂಪಿಸುತ್ತಿದೆ. ಅವು ಯಾರನ್ನು ತಲುಪುತ್ತಿದೆ ಎಂಬುದೇ ಪ್ರಶ್ನೆಯಾಗಿದೆ. ನಿವೇಶನ ರಹಿತರ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ, ಇವರಿಗೆ ಮಾನವೀಯ ಪ್ರಜ್ಞೆಯೇ ಇಲ್ಲವಾಗಿದೆ’ ಎಂದು ಟೀಕಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ್ ಮಾತನಾಡಿ, ‘ರಾಜ್ಯದಲ್ಲಿ 20 ಸಾವಿರ ಸದಸ್ಯತ್ವ ಹೊಂದಿರುವ ಸಂಘಟನೆ ಭೂ ರಹಿತರಿಗೆ ಜಮೀನು ಹಾಗೂ ವಸತಿ ರಹಿತರಿಗೆ ಮನೆ ನಿವೇಶನ ಒದಗಿಸುವ ಹೋರಾಟದಲ್ಲಿ ತೊಡಗಿಸಿಕೊಂಡಿದೆ’ ಎಂದು ಹೇಳಿದರು.

ಮುಖಂಡರಾದ ವೆಂಕಟೇಶ್, ಟಿ.ವಿಜಯಕುಮಾರ್, ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷೆ ವಿಜಯಮ್ಮ, ಸಮಾಜ ಸೇವಕ ಡಾ.ರಮೇಶ್‌ಬಾಬು, ರೈತ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮುಶಿವಣ್ಣ, ಬಹುಜನ ಮಹಿಳಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸುಜಾತಾ, ಮಂಜುನಾಥ್, ಮೈಸೂರಿನ ಮೀಡಿಯಾ ಸಂಪರ್ಕ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧೀಕಾಆರಿ ದಿವ್ಯಾ, ಜಿಲ್ಲಾ ಸಂಚಾಲಕಿ ಶಿವಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT