ಬುಧವಾರ, ನವೆಂಬರ್ 25, 2020
18 °C

ಕೆರೆಗೆ ಕಾಯಕಲ್ಪ ನೀಡಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ‘ಕೆರೆ ಸಂಸ್ಕೃತಿಯ ಪುನರುಜ್ಜೀವನ ಇಂದಿನ ಅಗತ್ಯವಾಗಿದೆ. ನದಿ, ನಾಲೆಗಳಿಲ್ಲದ ಬಯಲುಸೀಮೆಯ ಕೆರೆಗಳಿಗೆ ಸರ್ಕಾರ ಕಾಯಕಲ್ಪ ಕಲ್ಪಿಸಬೇಕಿದೆ’ ಎಂದು ತಾಲ್ಲೂಕು ಹಸಿರು ಹೊನ್ನು ಬಳಗದ ಅಧ್ಯಕ್ಷ ರಾಜಾರೆಡ್ಡಿ ಹೇಳಿದರು.

ತಾಲ್ಲೂಕಿನ ಯರ್ರಂವಾರಿಪಲ್ಲಿ ಗ್ರಾಮದ ಸಮೀಪ ತಿರುಮಲ ನಾಯಕನ ಕೆರೆಗೆ ಗುರುವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾದಂತೆ ಕೆರೆಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕೆರೆಗಳಲ್ಲಿ ಹೂಳು ತುಂಬಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿವೆ. ಕಟ್ಟೆ ಹಾಗೂ ತೂಬುಗಳು ಶಿಥಿಲವಾಗಿವೆ ಎಂದು ಹೇಳಿದರು.

ಅಪರೂಪಕ್ಕೆ ಈ ವರ್ಷ ಉತ್ತಮ ಮಳೆಯಾಗಿದೆ. ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಹಾಗಾಗಿ ಗಂಗೆಗೆ ಕೃತಜ್ಞತಾಪೂರ್ವಕವಾಗಿ ಬಾಗಿನ ಅರ್ಪಿಸಲಾಗಿದೆ. ಇದು ನೀರನ್ನು ಪೂಜ್ಯ ಭಾವನೆಯಿಂದ ನೋಡುವ ಪರಿಯಾಗಿದೆ ಎಂದು ಹೇಳಿದರು.

ಮುಖಂಡರಾದ ವೈ.ಆರ್‌. ಶ್ರೀನಾಥ್, ಕೆ.ವಿ. ವೆಂಕಟಶಿವ, ಟಿ.ಕೆ. ನರಸಿಂಹಪ್ಪ, ಜೆ.ಆರ್‌ .ಶಿವಾರೆಡ್ಡಿ, ಶಂಕರಪ್ಪ, ಗಿರೀಶ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.