ಶುಕ್ರವಾರ, ಜೂನ್ 18, 2021
25 °C

ಪಾಳು ಬಿದ್ದ ಕಟ್ಟಡಕ್ಕೆ ಕಾಯಕಲ್ಪ: ವಾಣಿಜ್ಯ ಸಂಕೀರ್ಣ ಕೋವಿಡ್ ರೋಗಿಗಳ ಬಳಕೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ನಗರದ ಹೃದಯ ಭಾಗದಲ್ಲಿ ಪಾಳುಬಿದ್ದಿದ್ದ ತಾಲ್ಲೂಕು ಪಂಚಾಯಿತಿ ಸಂಕೀರ್ಣ ಹಾಗೂ ಹಳೇ ನ್ಯಾಯಾಲಯ ಕಟ್ಟಡಗಳ ಸ್ಥಳವನ್ನು ಕೋವಿಡ್‌ ರೋಗಿಗಳಿಗೆ ಬಳಕೆ ಮಾಡಲು ತಾಲ್ಲೂಕು ಆಡಳಿತ ನಿರ್ಧರಿಸಿದೆ.

ಸಂಕೀರ್ಣ ಪಾಳು ಬಿದ್ದಿದ್ದು ಸಾರ್ವಜನಿಕರ ಉಪಯೋಗಕ್ಕೆ ಇಲ್ಲವಾಗಿದೆ ಎಂದು ‘ಪ್ರಜಾವಾಣಿ’ಯಲ್ಲಿ ಏ.30ರಂದು ಪ್ರಕಟವಾಗಿತ್ತು. ಇದಕ್ಕೆ ತಾಲ್ಲೂಕು ಆಡಳಿತ ಸ್ಪಂದಿಸಿ, ನಗರಸಭೆಗೆ ಸ್ಥಳವನ್ನು ಸ್ವಚ್ಛಗೊಳಿಸಲು ಸೂಚಿಸಿದೆ.

ಶಾಸಕ ಎಚ್.ನಾಗೇಶ್‌ ಅವರು ಈಚೆಗೆ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಕಟ್ಟಡವನ್ನು ತಕ್ಷಣಕ್ಕೆ ಕೋವಿಡ್ ಸಂತ್ರಸ್ತರಿಗೆ ಉಪಯೋಗಿಸಿಕೊಳ್ಳಲು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆ ಪೌರಕಾರ್ಮಿಕರು ಬುಧವಾರ ಬೆಳಿಗ್ಗೆ ವಾಣಿಜ್ಯ ಸಂಕೀರ್ಣವನ್ನು ಸ್ವಚ್ಛಗೊಳಿಸುವ ಕೆಲಸ ಆರಂಭಿಸಿದ್ದಾರೆ ಎಂದು ತಹಶೀಲ್ದಾರ್ ಕೆ.ಎನ್.ರಾಜಶೇಖರ್ ತಿಳಿಸಿದ್ದಾರೆ.

ನಗರಸಭೆ ಅಧ್ಯಕ್ಷ ರಿಯಾಜ್ ಅಹಮದ್, ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.