ಕೋಲಾರ: ‘ಅಪ್ಪನ ದುಡಿಮೆ ಸಾಕಾಗುತ್ತಿರಲಿಲ್ಲ. ನಾವು ಮೂವರು ಸಹೋದರರು. ಕೆಲವೊಮ್ಮೆ ಕಾಲೇಜಿನ ಶುಲ್ಕ ಪಾವತಿಸಲೂ ಹಣವಿರುತ್ತಿರಲಿಲ್ಲ. ಈ ವೇಳೆ ತಾಯಿ ತಮ್ಮ ಚಿನ್ನಾಭರಣ ಅಡವಿಟ್ಟು ನಮ್ಮನ್ನು ಓದಿಸಿದರು. ಮೂವರೂ ವಿದ್ಯಾವಂತರಾದೆವು. ಈಗ ನಮ್ಮ ಬದುಕು ಬದಲಾಗಿದೆ. ಅದಕ್ಕೆ ಪೋಷಕರು ಕರುಣಿಸಿದ ಶಿಕ್ಷಣವೇ ಕಾರಣ...’

ಐದನೇ ಪ್ರಯತ್ನದಲ್ಲಿ ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 741ನೇ ರ್ಯಾಂಕ್ ಪಡೆದಿರುವ ಕೋಲಾರ ಜಿಲ್ಲೆ ಬಂಗಾರಪೇಟೆಯ ವಿಜಯನಗರ ಬಡಾವಣೆ ನಿವಾಸಿ ತೌಸಿಫ್ ಉಲ್ಲಾ ಖಾನ್ ಅವರ ಮಾತುಗಳಿವು.

ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದೆವು. ಅಪ್ಪ ತಿಂಗಳಿಗೆ ಏಳೆಂಟು ಸಾವಿರ ರೂಪಾಯಿ ದುಡಿಯುತ್ತಿದ್ದರು. ನಮ್ಮದು ಬಡತನದ ಬದುಕು. ಕುಟುಂಬ ನಿರ್ವಹಣೆಯೇ ತುಂಬಾ ಕಷ್ಟವಿತ್ತು. ಆದರೆ, ಓದಿಗೆ ಈ ಬಡತನ ಅಡ್ಡಿಯಾಗಲಿಲ್ಲ. ಪೋಷಕರು ಕಷ್ಟಪಟ್ಟು, ತ್ಯಾಗ ಮಾಡಿ ಮೂವರು ಮಕ್ಕಳನ್ನು ಚೆನ್ನಾಗಿ ಓದಿಸಿದ್ದಾರೆ. ನನಗೆ ಉದ್ಯೋಗ ಸಿಕ್ಕಿದ ಮೇಲಷ್ಟೇ ನಮ್ಮ ಬದುಕು ಸುಧಾರಿಸಿದೆ. ತಮ್ಮ ಮಲಿಕ್ ಎಂಬಿಬಿಎಸ್ ಓದುತ್ತಿದ್ದಾನೆ. ಮತ್ತೊಬ್ಬ ತಮ್ಮ ತೌಕಿರ್ ಎಂಬಿಎ ಮುಗಿಸಿದ್ದಾನೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಂದೆ ಸನಾವುಲ್ಲಾ ಖಾನ್ ಬಂಗಾರಪೇಟೆಯಲ್ಲಿ ಸ್ವಯಂ ಉದ್ಯೋಗ ಮಾಡಿಕೊಂಡಿದ್ದಾರೆ. ತಾಯಿ ಮೋಶಿನಾ ಗೃಹಿಣಿ.

ತೌಸಿಫ್ ಬಂಗಾರಪೇಟೆಯ ಇನ್ಫ್ಯಾಂಟ್ ಜೀಸಸ್ ಶಾಲೆಯಲ್ಲಿ 1ರಿಂದ 10ರವರೆಗೆ ಓದಿದರು. ನಂತರ ಕೋಲಾರ ನಗರದ ಮಹಿಳಾ ಸಮಾಜ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಬೆಂಗಳೂರಿನ ಆರ್.ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು.

ಎರಡು ವರ್ಷ ಕೊಚ್ಚಿನ್, ಮುಂಬೈ, ಬೆಂಗಳೂರಿನಲ್ಲಿ ಗೋದ್ರೇಜ್ ಕಂಪನಿಯಲ್ಲಿ ಕೆಲಸ ಮಾಡಿದೆ. ಉತ್ತಮ ವೇತನ ಬರುತ್ತಿದ್ದ ಕೆಲಸವನ್ನು ಯುಪಿಎಸ್ಸಿಗೆ ಸಿದ್ಧತೆ ನಡೆಸಲು ಬಿಟ್ಟೆ. ಮತ್ತೆ ಎಲ್ಲಾದರೂ ಕೆಲಸ ಸಿಗುತ್ತದೆ ಎಂಬ ವಿಶ್ವಾಸ ನನಗಿತ್ತು. ಹೀಗಾಗಿ, ಕೆಲಸ ಬಿಟ್ಟೆ. ಅಂದು ಧೈರ್ಯದಿಂದ ತೆಗೆದುಕೊಂಡ ನಿರ್ಧಾರ ಸರಿಯಾಗಿಯೇ ಇತ್ತು ಎಂದರು.

ಸದ್ಯ ಅವರು ಆರು ತಿಂಗಳಿನಿಂದ ಹೈದರಾಬಾದ್ನಲ್ಲಿರುವ ಕೇಂದ್ರ ಸರ್ಕಾರದ ಸಿಎಸ್ಐಆರ್ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಈಗ ಬಂದಿರುವ ರ್ಯಾಂಕಿಂಗ್ಗೆ ಐಆರ್ಎಸ್ ಉದ್ಯೋಗ ಸಿಗುವ ಸಾಧ್ಯತೆ ಇದೆ. ಅಂಕಪಟ್ಟಿ ಬಂದ ಮೇಲೆ ಮತ್ತೊಂದು ಪ್ರಯತ್ನಕ್ಕೆ ಯೋಚನೆ ಮಾಡುತ್ತೇನೆ ಎಂದು 27 ವರ್ಷ ವಯಸ್ಸಿನ ತೌಸಿಫ್ ಹೇಳಿದರು.

ಗೋದ್ರೇಜ್ ಇಂಟಿರಿಯೋ ವಿಭಾಗದಲ್ಲಿ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವಾಗ ಯುಪಿಎಸ್ಸಿ ಪರೀಕ್ಷೆ ಬರೆಯಬೇಕೆಂಬ ಕನಸು ಮೂಡಿತು. ಅಲ್ಲಿದ್ದ ಅಧಿಕಾರಿಗಳನ್ನು ನೋಡಿ, ಅವರ ಮಾತಿನಿಂದ ಸ್ಫೂರ್ತಿಗೊಂಡು ಸಿದ್ಧತೆ ಶುರು ಮಾಡಿದೆ. 2021ರಲ್ಲಿ ಸ್ವಲ್ಪ ದಿನ ದೆಹಲಿಯಲ್ಲಿ ಕೋಚಿಂಗ್ ಪಡೆದೆ. ನಂತರ ಬಂಗಾರಪೇಟೆಯಲ್ಲಿ ಇದ್ದುಕೊಂಡು ಓದಿದೆ, ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದಲೂ ಸಹಾಯವಾಯಿತು ಎಂದರು.

ಯಶಸ್ಸಿಗೆ ಗುರಿ, ಬದ್ಧತೆ, ಶಿಸ್ತು, ಪರಿಶ್ರಮ ಅಗತ್ಯ. ಸ್ವಯಂ ಪ್ರೇರಣೆ ಹೊಂದಿರಬೇಕು ಎಂದು ಅವರು ಪರೀಕ್ಷಾ ಆಕಾಂಕ್ಷಿಗಳಿಗೆ ಸಲಹೆ ನೀಡಿದರು.

ತೌಸಿಫ್ ಸೇರಿದಂತೆ ಕೋಲಾರ ಜಿಲ್ಲೆಯ ಐವರು ಅಭ್ಯರ್ಥಿಗಳು ಈ ಬಾರಿಯ ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾದಂತಾಗಿದೆ. ಇದು ಈ ಬಾರಿ ಇಡೀ ರಾಜ್ಯದಲ್ಲಿ ಅಧಿಕ ಸಂಖ್ಯೆಯಾಗಿದೆ.

ಕಳೆದ ಸಲ 1 ಅಂಕದಿಂದ ತಪ್ಪಿದ್ದ ರ್ಯಾಂಕ್ ನಾನು ಒಟ್ಟು ಐದು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದೇನೆ. 2021 2022 2023ರಲ್ಲಿ ಅನುತ್ತೀರ್ಣನಾಗಿದ್ದೆ. 2024ರಲ್ಲಿ ಸಂದರ್ಶನದವರೆಗೆ ಹೋಗಿದ್ದೆ. ಕೇವಲ 1 ಅಂಕದಿಂದ ಆಗ ರ್ಯಾಂಕ್ ತಪ್ಪಿ ಹೋಗಿತ್ತು. ಬಹಳ ಬೇಸರವಾಗಿತ್ತು. ಅದನ್ನೇ ಸವಾಲಾಗಿ ಸ್ವೀಕರಿಸಿ ಛಲದಿಂದ ಓದಿದೆ. ಈ ಬಾರಿ ಯಶಸ್ಸು ಸಿಕ್ಕಿದೆ. ಯಾವತ್ತೂ ಹಿಡಿದ ಗುರಿ ಛಲ ಬಿಡಬಾರದು ಎಂದು ತೌಸಿಫ್ ಖಾನ್ ಹೇಳಿದರು

ತಮ್ಮಂದಿರು ಎಂಬಿಬಿಎಸ್ ಎಂಬಿಎ!

ತೌಸಿಫ್ ಯುಪಿಎಸ್ಸಿ ಉತ್ತೀರ್ಣರಾಗಿದ್ದಾರೆ. ಅವರ ತಮ್ಮ ತೌಕಿರ್ ಎಂಬಿಎ ವ್ಯಾಸಂಗ ಮಾಡಿದ್ದು ಮತ್ತೊಬ್ಬ ತಮ್ಮ ಮಲ್ಲಿಕ್ ಎಂಬಿಬಿಎಸ್ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. ನಮ್ಮ ಓದಿಗಾಗಿ ಪೋಷಕರು ತ್ಯಾಗ ಮಾಡಿದ್ದಾರೆ ನಮ್ಮ ಏಳಿಗಾಗಿ ನಿತ್ಯ ಪ್ರಾರ್ಥಿಸಿದ್ದಾರೆ. ಅವರ ಆ ತ್ಯಾಗ ಪರಿಶ್ರಮ ಬೆಂಬಲದಿಂದ ನಾನು ಯುಪಿಎಸ್ಸಿ ಪರೀಕ್ಷೆ ಪಾಸ್ ಆಗಲು ಸಾಧ್ಯವಾಗಿದೆ. ತಮ್ಮಂದಿರು ಉತ್ತಮ ವ್ಯಾಸಂಗ ಮಾಡಲು ಸಾಧ್ಯವಾಗಿದೆ. ಬದುಕು ಎಷ್ಟೇ ಕಷ್ಟವಿದ್ದರೂ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಅದು ಬದುಕನ್ನು ಬದಲಾಯಿಸುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.