ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಶೋಷಿತ ಸಮುದಾಯಗಳ ಧ್ವನಿ

ಕನ್ನಡ ಪಿಯು ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ಅಭಿಪ್ರಾಯ
Last Updated 29 ಡಿಸೆಂಬರ್ 2019, 12:57 IST
ಅಕ್ಷರ ಗಾತ್ರ

ಕೋಲಾರ: ‘ಕುವೆಂಪು ಅವರ ಹೆಜ್ಜೆ ಗುರುತುಗಳು ಮತ್ತು ಸಾಹಿತ್ಯ ಶೋಷಿತ ಸಮುದಾಯಗಳ ಧ್ವನಿಯಾಗಿ ರೂಪುಗೊಂಡಿದೆ’ ಎಂದು ಕನ್ನಡ ಪಿಯು ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ಅಭಿಪ್ರಾಯಪಟ್ಟರು.

ಇಲ್ಲಿನ ಟಿ.ಚನ್ನಯ್ಯ ರಂಗಮಂದಿರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ಕಲಾ ಸಂಘದ ಸಹಯೋಗದಲ್ಲಿ ಭಾನುವಾರ ನಡೆದ ಕುವೆಂಪು ಅವರ ಸ್ಮರಣೆ ಮತ್ತು ವಿಶ್ವ ಮಾನವ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಾರತ ದೇಶವು ಭಾವೈಕ್ಯತೆಗಳಿಂದ ಕೂಡಿದ್ದು ಎಲ್ಲ ಜಾತಿ ಧರ್ಮಗಳನ್ನು ಒಂದೇ ದೃಷ್ಟಿ ಕೋನದಲ್ಲಿ ಸರ್ವಜನಾಂಗದ ಶಾಂತಿಯ ತೋಟದ ಮೂಲಕ ನಾಡ ಗೀತೆಯನ್ನು ರಚಿಸಿಕೊಟ್ಟಿದ್ದು, ಸಮಾಜವನ್ನು ಎಚ್ಚರಿಸುವ ಶಕ್ತಿ ಇದರಲ್ಲಿ ಅಡಗಿದೆ’ ಎಂದರು.

‘ಯುದ್ಧದ ಕ್ರಾಂತಿಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಶಾಂತಿಯ ಸಂದೇಶದ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯ. ಯುವಕರು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಂತಹ ಪರಿಕಲ್ಪನೆಯ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ’ ಎಂದು ವಿವರಿಸಿದರು.

‘ಸಮಾಜದ ಕಟ್ಟಕಡೆಯ ವ್ಯಕ್ತಿಯ ಆಶಯಗಳನ್ನು ಗಮನದಲ್ಲಿರಿಸಿಕೊಂಡು ಪರಿಸರ ರಕ್ಷಣೆ ಮಾಡುವ ಆರಾಧನೆಯ ಕಾವ್ಯಗಳನ್ನು ರಚಿಸಿದ್ದಾರೆ. ಮಾನವೀಯ ಮೌಲ್ಯಗಳನ್ನು ಜನರಿಗೆ ಮುಟ್ಟಿಸಲು ಕಾವ್ಯ, ನಾಟಕ, ಕವಿತೆಗಳಿಂದ ಸಹಕಾರಿಯಾಗುತ್ತದೆ’ ಎಂದು ಹೇಳಿದರು.

‘ಪ್ರಸ್ತುತ ರಾಜಕೀಯ ವ್ಯವಸ್ಥೆಯ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕುವೆಂಪು ಅವರ ಸಾಹಿತ್ಯ ಮೂಲಕ ಯುವಕರನ್ನು ಸರಿದಿಕ್ಕಿನಲ್ಲಿ ಕರೆದುಕೊಂಡು ಹೋಗುವ ಮೂಲಕ ವಿಶ್ವ ಮಾನವರನ್ನಾಗಿಸಬೇಕು’ ಎಂದು ಸಲಹೆ ನೀಡಿದರು.

ಗೃಹ ಪ್ರವೇಶ ಸಮಿತಿ ಸಂಚಾಲಕ ಪ್ರೊ.ಅರಿವು ಶಿವಪ್ಪ ಮಾತನಾಡಿ, ‘ಕನ್ನಡದ ಮೊದಲ ರಾಷ್ಟ್ರ ಕವಿ ಗೋವಿಂದಪೈ ಅವರು 15 ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದು, ಬೇರೆ ಬೇರೆ ಧರ್ಮಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಕುವೆಂಪು ಅವರ ಹಾದಿಯಲ್ಲೆ ಸಾಹಿತ್ಯವನ್ನು ರಚಿಸಿದ್ದಾರೆ’ ಎಂದು ಸ್ಮರಿಸಿದರು.

‘ಗೋವಿಂದಪೈ ಅವರು ಜೀವನವನ್ನ ಓದು ಮತ್ತು ಬರವಣಿಗೆಗೆ ಸಿಮೀತಗೊಳಿಸಿಕೊಂಡಿದ್ದರು. ಅವರ ಬರವಣಿಗೆಯಲ್ಲಿ ವೈವಿಧ್ಯತೆಯನ್ನ ಕಾಣಬಹುದಾಗಿದೆ. ಕುವೆಂಪು ಅವರ ಸಾಹಿತ್ಯ, ಸಂದೇಶಗಳು ಈಗಿನ ಸಮಾಜಕ್ಕೆ ಪ್ರಸ್ತುವಾಗಿದೆ’ ಎಂದು ಹೇಳಿದರು.

ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್, ಕಲಾವಿದ ಪಿ.ಮುನಿರೆಡ್ಡಿ, ಸಾಹಿತಿ ಕೃಷ್ಣಪ್ಪ, ಕರವೇ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ್, ಕನ್ನಡ ಕಲಾ ಸಂಘದ ಅಧ್ಯಕ್ಷ ವಿಕ್ಕಮುನಿಯಪ್ಪ, ಕುವೆಂಪು ಕನ್ನಡ ಕಲಾ ಸಂಘದ ಅಧ್ಯಕ್ಷ ಎಲ್.ಇ.ಕೃಷ್ಣೇಗೌಡ, ಮುಖ್ಯೋಪಾಧ್ಯಾಯ ರುದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT