ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಮುಗಿದರೂ ಚರಂಡಿ ಸಂಪರ್ಕ ಇಲ್ಲ

11 ವರ್ಷ ಕಳೆದರೂ ಸಂಪರ್ಕ ಕಲ್ಪಿಸದೆ ನಿರ್ಲಕ್ಷ್ಯ: ಗ್ರಾಮಸ್ಥರ ಆರೋಪ
Last Updated 18 ಫೆಬ್ರುವರಿ 2021, 4:56 IST
ಅಕ್ಷರ ಗಾತ್ರ

ಮಾಲೂರು: ಯುಜಿಡಿ ಕಾಮಗಾರಿ ಪೂರ್ಣಗೊಂಡು 11 ವರ್ಷ ಕಳೆದರೂ ಸಂಪರ್ಕ ಕಲ್ಪಿಸದೆ ಛೇಂಬರ್‌ಗಳಲ್ಲಿ ಕೊಳಚೆ ನೀರು ತುಂಬಿ ಹರಿಯುತ್ತಿರುವುದರಿಂದ ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ.

ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಪಟ್ಟಣದಲ್ಲಿ 2009ರಲ್ಲಿ ₹22.05 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಆರಂಭವಾಯಿತು. ಪೈಪ್‌ಲೈನ್ ಅಳವಡಿಸಲು ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿನ ರಸ್ತೆಗಳನ್ನು ಅಗೆದು ಕಾಮಗಾರಿ ಬಿರುಸಿನಿಂದ ಪ್ರಾರಂಭಿಸಲಾಯಿತು. ಆದರೆ ಕ್ರಮೇಣ ಆಮೆಗತಿಯಲ್ಲಿ
ಸಾಗಲಾರಂಭಿಸಿತು.

ಪಟ್ಟಣದ ದೊಡ್ಡ ಕೆರೆಯ ಸಮೀಪ ಎರಡು ಎಕರೆ ಜಮೀನು ಖಾಸಗಿಯವರಿಂದ ಖರೀದಿಸಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀಡಿದೆ.
ಅದರಂತೆ 4 ದಶಲಕ್ಷ ಸಾಮರ್ಥ್ಯ ಹೊಂದಿರುವ ಶುದ್ದೀಕರಣ ಘಟಕದ ಕಾಮಗಾರಿ ಪೂರ್ಣಗೊಂಡು 4 ವರ್ಷಗಳು ಕಳೆದಿದೆ. ಆದರೆ ಇಲ್ಲಿಯವರೆಗೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಟ್ಟಣದ ನಾಗರಿಕರಿಗೆ ಒಳಚರಂಡಿ ಸೌಲಭ್ಯ ಸಂಪರ್ಕ ಕಲ್ಪಿಸದೆ ನಿರ್ಲಕ್ಷ್ಯವಹಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಶುದ್ದೀಕರಣ ಘಟಕ ಕಾಮಗಾರಿ ಪೂರ್ಣಗೊಂಡು ಮೂರ್ನಾಲ್ಕು ವರ್ಷಗಳು ಕಳೆದಿದೆ. ಆದರೆ ಕೊಳಚೆ ನೀರುಸರಬರಾಜು ಮಾಡದೆ ಇರುವುದರಿಂದ ಘಟಕದ ಯಂತ್ರಗಳು ಶಿಥಿಲಹಂತಕ್ಕೆ ತಲುಪುತ್ತಿದೆ.

ಪುರಸಭೆಯಿಂದ ಒಳ ಚರಂಡಿ ಸಂಪರ್ಕ ಕಲ್ಪಿಸದೆ ಇರುವುದರಿಂದ ಪಟ್ಟಣದ ಕೆಲವು ಬಡಾವಣೆಗಳಲ್ಲಿ ನಾಗರಿಕರು ಒಳಚರಂಡಿ ಪೈಪ್ ಲೈನಿಗೆ ಅಕ್ರಮ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ಇದರಂದ ಕೊಳಚೆ ನೀರು ಪೈಪ್ ಲೈನುಗಳಲ್ಲಿ ಹರಿದು ರಸ್ತೆ ನಡುವೆ ನಿರ್ಮಿಸಿರುವ ಛೇಂಬರ್‌ಗಳು ತುಂಬಿ ಮುಂದಕ್ಕೆ ಹರಿಯಲು ಸ್ಥಳವಿಲ್ಲದೆ ರಸ್ತೆಗಳಲ್ಲಿ ಹುಕ್ಕಿ ಹರಿಯುತ್ತಿವೆ. ಇದರಿಂದ ದುರ್ನಾತ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಪಟ್ಟಣದ ದೊಡ್ಡಕೆರೆಯಲ್ಲಿ ಹಾದುಹೋಗಿರುವ ಪೈಪ್‌ಲೈನ್‌ನಲ್ಲಿ
ಕೊಳಚೆ ನೀರು ಹರಿದು
ಛೇಂಬರುಗಳು ತುಂಬಿ ಉಕ್ಕಿ ಹರಿಯುತ್ತಿವೆ. ಇದರಿಂದ ಕೆರೆಯಲ್ಲಿ ಮಲಿನ ನೀರು ಸಂಗ್ರಹವಾಗುತ್ತಿದೆ. ಕೆರೆಯ ಅಂಚಿನಲ್ಲಿ ವಾಸವಾಗಿರುವನಾಗರಿಕರಿಗೆ ರೋಗ–ರುಜಿನಗಳು ಹರಡಬಹುದೆಂಬ ಶಂಕೆ ಆವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT