‘ಟಿಕ್‌–ಟಾಕ್‌’ ಗೀಳು: ವಿದ್ಯಾರ್ಥಿನಿ ಸಾವು

ಸೋಮವಾರ, ಜೂಲೈ 22, 2019
27 °C

‘ಟಿಕ್‌–ಟಾಕ್‌’ ಗೀಳು: ವಿದ್ಯಾರ್ಥಿನಿ ಸಾವು

Published:
Updated:
Prajavani

ಕೋಲಾರ: ಟಿಕ್–ಟಾಕ್‌ ಮಾಡುವ ಯತ್ನದಲ್ಲಿ ವಿದ್ಯಾರ್ಥಿನಿಯೊಬ್ಬರು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ವಡಗೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ವಡಗೇರಿ ಗ್ರಾಮದ ನಿವಾಸಿ ನಾರಾಯಣಪ್ಪ ಎಂಬುವರ ಪುತ್ರಿ ಮಾಲಾ (20) ಮೃತಪಟ್ಟವರು. ಇವರು ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬಿ.ಎ ಓದುತ್ತಿದ್ದರು.

ಗ್ರಾಮದ ರೈತರೊಬ್ಬರ ಜಮೀನಿಗೆ ಹೋಗಿದ್ದ ಮಾಲಾ ಕೃಷಿ ಹೊಂಡದ ಬಳಿ ನಿಂತು ಮೊಬೈಲ್‌ನಲ್ಲಿ ಟಿಕ್‌–ಟಾಕ್‌ ಮಾಡುವ ಯತ್ನದಲ್ಲಿ ಆಯತಪ್ಪಿ ಕೃಷಿ ಹೊಂಡದೊಳಗೆ ಬಿದ್ದಿದ್ದಾರೆ. ಅವರಿಗೆ ಈಜು ಬಾರದ ಕಾರಣ ಹೊರ ಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಂಜೆಯಾದರೂ ಮಾಲಾ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಪೋಷಕರು ಜಮೀನಿನ ಬಳಿ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಲಾ ಅವರು ಟಿಕ್‌–ಟಾಕ್‌ ಮಾಡುತ್ತಿದ್ದ ಸಂದರ್ಭದಲ್ಲೇ ಕೃಷಿ ಹೊಂಡಕ್ಕೆ ಬಿದ್ದಿರುವ ದೃಶ್ಯಾವಳಿ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮೊಬೈಲ್‌ ಘಟನಾ ಸ್ಥಳದ ಸಮೀಪವೇ ಸಿಕ್ಕಿದೆ ಎಂದು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 13

  Happy
 • 3

  Amused
 • 15

  Sad
 • 7

  Frustrated
 • 18

  Angry

Comments:

0 comments

Write the first review for this !