ಕೆಜಿಎಫ್: ರಾಬರ್ಟಸನ್ ಪೇಟೆಯಲ್ಲಿ ಸಂಚಾರ ಅವ್ಯವಸ್ಥೆ ಮತ್ತು ಸಂಚಾರ ಸುಗಮಗೊಳಿಸುವಲ್ಲಿ ಪೊಲೀಸರ ನಿರಾಸಕ್ತಿಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ನಗರದ ನಾನ್ ಮೈನಿಂಗ್ ಪ್ರದೇಶದಲ್ಲಿ ಅತಿ ದಟ್ಟಣೆ ಇರುವ ರಾಬರ್ಟಸನ್ ಪೇಟೆಯಲ್ಲಿ ಸಂಚಾರ ನಿಯಮ ಪಾಲನೆ ಮಾಡುತ್ತಿಲ್ಲ. ಇದರಿಂದ ವಾಹನ ಸಂಚಾರ ಮತ್ತು ವಾಹನ ನಿಲುಗಡೆ ಅಡ್ಡಾದಿಡ್ಡಿಯಾಗಿರುವುದರಿಂದ ಸಾರ್ವಜನಿಕರು ಮುಕ್ತವಾಗಿ ಸಂಚಾರ ಮಾಡಲು ಹರಸಾಹಸ ಪಡುವಂತಾಗಿದೆ.

ಸೂರಜ್ಮಲ್ ವೃತ್ತದಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸಿಗ್ನಲ್ ಲೈಟ್ ಅಳವಡಿಸಿದ ಹೆಗ್ಗಳಿಕೆ ಇತ್ತು. ಅಂದಿನ ಎಸ್.ಪಿ ಎಂ.ವಿ.ಮೂರ್ತಿ ಅವರ ಕಾಲದಲ್ಲಿ ಕೇಂದ್ರ ಸರ್ಕಾರ ಉದ್ಯಮವೊಂದರ ನೆರವಿನಿಂದ ಸಿಗ್ನಲ್ ದೀಪಗಳನ್ನು ಅಳವಡಿಸಲಾಯಿತು. ವೃತ್ತದ ನಾಲ್ಕು ಕಡೆಗಳಲ್ಲಿ ಸಿಗ್ನಲ್ ದಾಟದಂತೆ ಬಿಳಿ ಪಟ್ಟಿ ಬಳಿದು ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲನೆ ಬಗ್ಗೆ ತಿಳಿಸಲಾಗಿತ್ತು.

ರೋಹಿಣಿ ಕಟೋಚ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ಸಾವಿರಾರು ಶಾಲಾ ವಿದ್ಯಾರ್ಥಿಗಳಿಗೆ ಸಾಮೂಹಿಕ ಸಂಚಾರ ನಿಯಮ ಬಗ್ಗೆ ಬೃಹತ್ ಜಾಗೃತಿ ಮೂಡಿಸಲಾಗಿತ್ತು. ನಂತರದ ದಿನಗಳಲ್ಲಿ ಪೊಲೀಸ್ ಇಲಾಖೆಯಿಂದ ಅದರ ತೀವ್ರತೆ ಕಡಿಮೆಯಾಗುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮ ಪಾಲನೆ ಮಾಸಾಚರಣೆ ಕೇವಲ ದಾಖಲೆಗಾಗಿ ನಡೆಯುತ್ತಿದೆ ಎಂಬ ಆರೋಪವೂ ಇದೆ.

ರಾಬರ್ಟಸನ್ಪೇಟೆ ಸೂರಜ್ಮಲ್ ವೃತ್ತ ಬೆಳಗ್ಗೆ ಮತ್ತು ಸಂಜೆ ಸದಾ ಜನದಟ್ಟಣೆ ಮತ್ತು ವಾಹನ ದಟ್ಟಣೆಯಿಂದ ಕೂಡಿರುತ್ತದೆ. ನೆಪ ಮಾತ್ರಕ್ಕೆ ಸಿಗ್ನಲ್ ಇದೆ. ಆದರೆ, ಬಹುತೇಕ ಮಂದಿ ಅದನ್ನು ಪಾಲಿಸುವುದೇ ಇಲ್ಲ. ಇದರಿಂದಾಗಿ ನಿಯಮ ಪಾಲನೆ ಮಾಡುವವರಿಗೆ ಕಿರಿಕಿರಿಯಾಗುತ್ತಿದೆ. ಸೂರಜ್ಮಲ್ ವೃತ್ತದಿಂದ ಆಂಡರ್ಸನ್ ಪೇಟೆಗೆ ಹೋಗುವ ಎರಡೂ ಬದಿ ಹಲವು ಬ್ಯಾಂಕ್ಗಳಿವೆ.

ರಸ್ತೆಯ ಬದಿಯಲ್ಲಿಯೇ ಆಟೊ ನಿಲ್ದಾಣ ಕೂಡ ಇದೆ. ಬ್ಯಾಂಕ್ ಮತ್ತಿತರ ಕೆಲಸಗಳಿಗೆ ಹೋಗುವ ಸಾರ್ವಜನಿಕರು ರಸ್ತೆಯಲ್ಲಿಯೇ ವಾಹನ ನಿಲ್ಲಿಸಿ ಹೋಗುತ್ತಾರೆ. ಆಟೊ ಚಾಲಕರು ಕೂಡ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಪೈಪೋಟಿಯಲ್ಲಿ ರಸ್ತೆಯನ್ನೇ ಅತಿಕ್ರಮಿಸಿಕೊಂಡು ನಿಂತಿರುತ್ತಾರೆ. ಇಲ್ಲಿ ಕೂಡ ವಾಹನ ಸವಾರರು ಮತ್ತು ಪಾದಚಾರಿಗಳು ಮುಕ್ತವಾಗಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ.

ಆಂಡರಸನ್ಪೇಟೆಯಿಂದ ಸೂರಜ್ಮಲ್ ವೃತ್ತಕ್ಕೆ ಕೂಡಿಕೊಳ್ಳುವ ಜಾಗದಲ್ಲಿ ಬ್ಯಾಂಕ್ ಮುಂಭಾಗದ ಜಾಗ ಅನಧಿಕೃತ ಪಾರ್ಕಿಂಗ್ ಪ್ರದೇಶವಾಗಿ ಮಾರ್ಪಟ್ಟಿದೆ. ಬ್ಯಾಂಕ್ಗೆ ಹೋಗುವ ಗ್ರಾಹಕರು ರಸ್ತೆ ಪಾದಚಾರಿ ರಸ್ತೆಯಲ್ಲಿಯೇ ಬೈಕ್ಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸಬೇಕಾಗಿದೆ.

ಎಸ್ಬಿಐ ಬಳಿ ಪಾದಚಾರಿಗಳಿಗೆ ಸಂಚಾರ ಮುಕ್ತಗೊಳಿಸಿ ಎಂದು ಪೊಲೀಸ್ ಇಲಾಖೆಗೆ ಪತ್ರ ನೀಡಿದ್ದರೂ ಕ್ರಮ ಜರುಗಿಸಿಲ್ಲ.
ಲಕ್ಷ್ಮೀನಾರಾಯಣ, ಉದ್ಯೋಗಿ

ಈ ಅನಧಿಕೃತ ಪಾರ್ಕಿಂಗ್ ಪ್ರದೇಶಕ್ಕೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಅದನ್ನು ಅಧಿಕೃತ ಪಾರ್ಕಿಂಗ್ ಪ್ರದೇಶವನ್ನಾಗಿ ಮಾಡಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಎಂ.ಜಿ.ವೃತ್ತದಲ್ಲಿ ಆರು ರಸ್ತೆ ಕೂಡಿಕೊಳ್ಳುತ್ತದೆ. ವಾಹನ ದಟ್ಟಣೆ ತಡೆಗಟ್ಟಲು ಊರಿಗಾಂಪೇಟೆ ರಸ್ತೆ ಮೂಲಕ ಎಂ.ಜಿ ಮಾರುಕಟ್ಟೆಗೆ ಹೋಗುವ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ನಾಮಫಲಕ ಅಳವಡಿಸಲಾಗಿದೆ. ಸಂಚಾರ ನಿಯಮ ಪಾಲನೆಗೆ ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ. ಆದರೂ, ಏಕಮುಖ ಸಂಚಾರ ರಸ್ತೆಯಲ್ಲಿ ಎರಡೂ ಬದಿ ವಾಹನಗಳು ಸಂಚರಿಸುತ್ತಿವೆ. ಪೊಲೀಸ್ ಸಿಬ್ಬಂದಿ ಅಸಹಾಯಕರಾಗಿ ನೋಡುವ ಪರಿಸ್ಥಿತಿ ಎದುರಾಗಿದೆ. ಎಂ.ಜಿ.ಮಾರುಕಟ್ಟೆ ಮುಖ್ಯದ್ವಾರ ಬರುವ ಪ್ರಿಚರ್ಡ್ ರಸ್ತೆಯಲ್ಲಿ ಎರಡೂ ಬದಿ ವಾಹನ ನಿಂತಿರುವುದರಿಂದ ಬಸ್ ಚಾಲಕರು ಮುಂದೆ ಸಾಗಲು ತ್ರಾಸಪಡುವಂತಾಗಿದೆ.

ಇಷ್ಟೆಲ್ಲ ಸಂಚಾರ ಕಿಷ್ಕಿಂಧೆಯಲ್ಲಿ ಜನ ಬೇಸತ್ತಿರುವಾಗ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ತ್ರಿಬ್ಬಲ್ ರೈಡಿಂಗ್ ಸವಾರಿ ಪಾದಚಾರಿಗಳಿಗೆ ಪ್ರಾಣಭೀತಿ ಉಂಟು ಮಾಡಿದೆ.

ಸಮನ್ವಯದಿಂದ ಸಮಸ್ಯೆಗೆ ಪರಿಹಾರ

ರಾಬರ್ಟಸನ್ಪೇಟೆ ಬಸ್ ನಿಲ್ದಾಣ ಸುತ್ತಮುತ್ತಲಿನ ಪ್ರದೇಶ ಕಿರಿದಾಗಿದೆ. ವಾಹನ ನಿಲ್ದಾಣಕ್ಕೆ ಸೂಕ್ತ ಜಾಗ ಇಲ್ಲ. ಇದರಿಂದಾಗಿ ವಾಹನದಟ್ಟಣೆ ಉಂಟಾಗಿದೆ ಎಂದು ಪೊಲೀಸರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಎಲ್ಲ ಇಲಾಖೆಗಳ ಸಮನ್ವಯತೆಯಿಂದ ಕೆಲಸ ಮಾಡಿದರೆ ಸಂಚಾರ ಸಮಸ್ಯೆ ಬಗೆಹರಿಸಬಹುದು ಎಂದು ನಗರಸಭೆ ಆಯುಕ್ತ ಪವನ್ ಕುಮಾರ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.