ಶ್ರೀನಿವಾಸಪುರ: ಕೋಲಾರ-ಬೆಂಗಳೂರು ಬ್ರಾಡ್ ಗೇಜ್ ರೈಲು ಮಾರ್ಗ ವಿದ್ಯುದೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಪರಿಶೀಲನಾ ಕಾರ್ಯ ನಡೆಯುತ್ತಿದೆ ಎಂದು ರೈಲ್ವೆ ಸಿಬ್ಬಂದಿ ತಿಳಿಸಿದರು.
ಈಗಾಗಲೇ ವಿದ್ಯುತ್ ಕಂಬ ನೆಟ್ಟು ತಂತಿ ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕ ನೀಡಿದಾಗ ಕೆಲವು ಕಡೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಮಾರ್ಗ ಪರಿಶೀಲನಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ವಿದ್ಯುತ್ ವಿಭಾಗದ ತಜ್ಞ ಸಿಬ್ಬಂದಿ ವಿಶೇಷ ವಾಹನದಲ್ಲಿ ಬಂದು ಮಾರ್ಗ ಪರಿಶೀಲಿಸುತ್ತಿದ್ದಾರೆ.
ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡ ಮೇಲೆ, ವಿದ್ಯುತ್ ನೆರವಿನಿಂದ ರೈಲು ಚಾಲನೆ ಮಾಡಲಾಗುವುದು. ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಗ ಮಿತಿಯೂ ಹೆಚ್ಚಲಿದೆ. ಅದರಿಂದ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು.
ಅನಿರೀಕ್ಷಿತವಾಗಿ ಮಾರ್ಗಕ್ಕೆ ಅಧಿಕ ಸಾಮಾರ್ಥ್ಯದ ವಿದ್ಯುತ್ ಹರಿಸುವುದರಿಂದ ಮಾರ್ಗದ ಕೆಲವು ಕಡೆ ಕೋತಿಗಳು ಸಾಯುತ್ತಿವೆ ಎಂದು ನಾಗರಿಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.