ಯಲವಾರ ಸೊಣ್ಣೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಗರದ ಬ್ಯಾಂಕ್ ಆವರಣದಲ್ಲಿ ಗುರುವಾರ ಚುನಾವಣೆ ನಿಗದಿಯಾಗಿತ್ತು. 14 ನಿರ್ದೇಶಕರಿದ್ದು, ಅಧ್ಯಕ್ಷ ಸ್ಥಾನಕ್ಕೆ ಟಿ.ಕೆ.ಬೈರೇಗೌಡ, ಕೆ.ಸಿ.ಮಂಜುನಾಥ್ಹಾ ಹಾಗೂ ಜಿ.ಅಮರೇಶ್ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಮನವೊಲಿಸಿ ಬೈರೇಗೌಡ ಮತ್ತು ಮಂಜುನಾಥ್ ಅವರಿಂದ ನಾಮಪತ್ರ ವಾಪಸ್ ಪಡೆದರು.