ಗುರುವಾರ , ಡಿಸೆಂಬರ್ 5, 2019
20 °C

ಅನಧಿಕೃತ ವಿದ್ಯುತ್‌ ಸಂಪರ್ಕ: ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರದ ವಿವಿಧೆಡೆ ಬುಧವಾರ ವಿಶೇಷ ಕಾರ್ಯಾಚರಣೆ ನಡೆದ ಬೆಸ್ಕಾಂ ಜಾಗೃತ ದಳ ಸಿಬ್ಬಂದಿಯು ಅನಧಿಕೃತ ವಿದ್ಯುತ್‌ ಸಂಪರ್ಕ ಪಡೆದಿದ್ದ ಸಂಬಂಧ 14 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ₹ 28 ಲಕ್ಷ ದಂಡ ವಿಧಿಸಿದ್ದಾರೆ.

ಬೆಸ್ಕಾಂ ಜಾಗೃತ ದಳ ಎಸ್ಪಿ ಕುಮಾರಸ್ವಾಮಿ ಆದೇಶದ ಅನ್ವಯ ಅಧಿಕಾರಿಗಳು ತಂಡ ವಿಶೇಷ ತಂಡ ರಚಿಸಿಕೊಂಡು ವಿವಿಧ ಬಡಾವಣೆಗಳಲ್ಲಿ ದಿಢೀರ್‌ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದವರಿಗೆ ಬಿಸಿ ಮುಟ್ಟಿಸಿದರು.

ನಗರದ ಗಾಂಧಿನಗರ, ಕೊಂಡರಾಜನಹಳ್ಳಿಯಲ್ಲಿ ಕೊಳವೆ ಬಾವಿಗಳಿಗೆ, ಸಂಪ್‌ಗಳ ಪಂಪ್‌ ಮತ್ತು ಮೋಟರ್‌ಗಳಿಗೆ ನಿಯಮಬಾಹಿರವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವುದು ಅಧಿಕಾರಿಗಳ ಪರಿಶೀಲನೆ ವೇಳೆ ಪತ್ತೆಯಾಗಿದೆ. ಕೃಷಿ ಉದ್ದೇಶಕ್ಕಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದ ಹಲವರು ವಾಣಿಜ್ಯ ಉದ್ದೇಶದ ಕೊಳವೆ ಬಾವಿಗಳಿಗೆ ವಿದ್ಯುತ್‌ ಬಳಸಿಕೊಂಡು ನೀರು ಮಾರಾಟ ಮಾಡುತ್ತಿದ್ದುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಬೆಸ್ಕಾಂ ಜಾಗೃತ ದಳ ಡಿವೈಎಸ್ಪಿ ನಾಗರಾಜ್, ಕಾರ್ಯ ನಿರ್ವಾಹಕ ಎಂಜಿನಿಯರ್‌ ನರಹರಿ ಹಾಗೂ ಇನ್‌ಸ್ಪೆಕ್ಟರ್‌ಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)