ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಮೇಲ್ಸುತುವೆ ದುರಸ್ತಿಗೆ ಒತ್ತಾಯ

ಉದುರುವ ಸಿಮೆಂಟ್‌, ಕಬ್ಬಿಣದ ಸರಳು ಸಡಿಲ, ಪ್ರಯಾಣಿಕರ ಆತಂಕ
Last Updated 29 ಡಿಸೆಂಬರ್ 2022, 3:28 IST
ಅಕ್ಷರ ಗಾತ್ರ

ಮಾಲೂರು: ಪಟ್ಟಣದ ಮಾಲೂರು-ಹೊಸೂರು ರಸ್ತೆಯಲ್ಲಿರುವ ರೈಲ್ವೆ ಮೇಲ್ಸುತುವೆ ಶಿಥಿಲಾವಸ್ಥೆ ತಲುಪಿದೆ. ಬೀಳುವ ಮುನ್ನ ದುರಸ್ತಿಗೊಳಿಸುವಂತೆ ಸಾರ್ವಜನಕರು ಹಾಗೂ ವಾಹನ ಸವಾರರು
ಒತ್ತಾಯಿಸಿದ್ದಾರೆ.

ಈ ಮೇಲ್ಸುತುವೆ 1973–74ರಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗಿದೆ. 16.13ಗುಂಟೆ ಜಮೀನು ಖಾಸಗಿ ಅವರಿಂದ ಖರೀದಿಸಿ ಸರ್ಕಾರಕ್ಕೆ ಸೇರಿದ 8.12 ಎಕರೆ ಭೂಮಿಯನ್ನು ಸೇರಿಸಿಕೊಂಡು 7.ಮೀ ಅಗಲದ ಸೇತುವೆ ನಿರ್ಮಾಣ ಮಾಡಲಾಗಿದೆ.

49 ವರ್ಷದ ಹಳೆಯದಾದ ಮೇಲ್ಸುತುವೆ ಮೇಲೆ ವಾಹನ ದಟ್ಟಣೆ ಸೇರಿದಂತೆ ಹೆಚ್ಚು ಟನ್ನೆಜ್ ವಾಹನಗಳು ಸಂಚರಿಸುತ್ತಿರುವುದರಿಂದ ಸೇತುವೆ ಸಿಮೆಂಟ್ ಉದುರಿಹೋಗಿ ಕಬ್ಬಿಣದ ಸರಳುಗಳು ಸಡಿಲಗೊಳ್ಳುವ ಮೂಲಕ ಶಿಥಿಲಗೊಂಡಿವೆ .

ಕೈಗಾರಿಕಾ ಕ್ರಾಂತಿ: ಪಟ್ಟಣದಲ್ಲಿ 2000ರ ನಂತರ ಕೈಗಾರಿಕಾ ಪ್ರಾಂಗಣ ಆರಂಭವಾಗಿದೆ. ಮಾಲೂರು-ಹೊಸೂರು ರಸ್ತೆಯಲ್ಲಿ ಕೂರಾಂಡಹಳ್ಳಿ ಕೈಗಾರಿಕಾ ಪ್ರಾಂಗಣ, ಎಚ್.ಹೊಸಕೋಟೆ ಹಾಗೂ ಬ್ಯಾಲಹಳ್ಳಿ ಕೈಗಾರಿಕಾ ಪ್ರಾಂಗಣಗಳಲ್ಲಿ ವಿವಿಧ ರೀತಿಯ ದೊಡ್ಡ ಮಟ್ಟದ ಕೈಗಾರಿಕೆಗಳು ಆರಂಭವಾಗಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗಿದೆ.

ಪ್ರತಿದಿನ ಸಾವಿರಾರು ವಾಹನಗಳು ಸೇತುವೆ ಮೇಲೆ ಸಂಚರಿಸುತ್ತವೆ. 10ಟನ್ ಭಾರ ಭರಿಸುವ ಶಕ್ತಿ ಹೊಂದಿರುವ ಈ ಸೇತುವೆ ಮೇಲೆ 200 ಟನ್ ಭಾರ ಹೊತ್ತು ಬರುವ ವಾಹನಗಳ ಸಂಖ್ಯೆ ಕಡಿಮೆಯಿಲ್ಲ. ಬೃಹತ್ ಕಾರ್ಖಾನೆಗಳಿಗೆ ಹೆಚ್ಚು ಟನ್ನೇಜ್ ತುಂಬಿಸಿಕೊಂಡ ಬರುವ ಲಾರಿಗಳು ಸೇತುವೆ ಮೂಲಕ
ಕೈಗಾರಿಕಾ ಪ್ರಾಂಗಣಕ್ಕೆ ಬರುತ್ತವೆ. ಇದರಿಂದ ಸೇತುವೆ ಯಾವಾಗ ಬೇಕಾದರೂ ಕುಸಿಯುವ ಆತಂಕ ಎದುರಾಗಿದೆ.

ಮಾಲೂರು ಮೂಲಕ ತಮಿಳುನಾಡಿಗೆ ಲಿಂಕ್: ಪಟ್ಟಣದ ರೈಲ್ವೆ ಮೇಲ್ಸುತುವೆ ಮೂಲಕ ಪಟ್ಟಣದ 6 ವಾರ್ಡ್‌ಗಳು ಸೇರಿದಂತೆ ಸುಮಾರು 16 ಪಂಚಾಯಿತಿಗಳು- ನೊಸಗೆರೆ, ಹುಲಿಮಂಗಲ ಹೊಸಕೋಟೆ ,ಲಕ್ಕೂರು, ಜಯಮಂಗಲ, ಚಿಕ್ಕತಿರುಪತಿ, ಡಿ.ಎನ್ ದೊಡ್ಡಿ, ಬಾಳಿಗಾನಹಳ್ಳಿ,ಕುಡೆಯನೂರು, ಸಂತೇಹಳ್ಳಿ, ಹುಳದೇನಹಳ್ಳಿ, ರಾಜೇನಹಳ್ಳಿ, ಅಸಾಂಡಹಳ್ಳಿ, ಮಾಸ್ತಿ, ತೃಣಿಸಿ, ದಿನ್ನಹಳ್ಳಿ, ಪಂಚಾಯತಿಗಳಿಗೆ ತೆರಳಲು ಮುಖ್ಯ
ರಸ್ತೆಯಾಗಿದೆ.

ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಆಂಧ್ರ
ಪ್ರದೇಶದ ಪುಂಗನೂರು ಕಡೆಯಿಂದ ಹೆಚ್ಚು ಟನ್ನೇಜ್ ತುಂಬಿಸಿಕೊಂಡು ತಮಿಳುನಾಡಿಗೆ ಹೋಗುವ ಲಾರಿಗಳು ಈ ಸೇತುವೆ ಮೇಲೆ ಸಾಗಬೇಕು. ಇದರಿಂದ ಹೆಚ್ಚು ಭಾರ ಹೊತ್ತು ಬರುವ ವಾಹನಗಳಿಂದ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ.

ಕಿರಿದಾದ ಮೇಲ್ಸುತುವೆ ರಸ್ತೆಯಲ್ಲಿ ಪ್ರತಿಒಂದಲ್ಲ ಅಪ
ಘಾತಕ್ಕೆ ಈಡಾಗಿ ವಾಹನ ಸವಾರರು ಮೃತಪಡುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಸಂಬಂಧಪಟ್ಟ ಇಲಾಖೆ ಹಾಗೂ ಈ ಭಾಗದ ಜನ ಪ್ರತಿನಿಧಿಗಳು ಎಚ್ಚತ್ತುಕೊಳ್ಳಬೇಕೆಂದು ಸಾರ್ವ
ಈ ಸಂದರ್ಭದಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT