ವೇಮಗಲ್: ಕಸ ಸಮರ್ಪಕ ವಿಲೇವಾರಿ ಮತ್ತು ವೈಜ್ಞಾನಿಕ ನಿರ್ವಹಣೆಗಾಗಿ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಯು ನೂತನ ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಂ. ವೆಂಕಟೇಶ್ ತಿಳಿಸಿದರು.

ಮನೆ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲಿಯೇ ಕಡ್ಡಾಯವಾಗಿ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ವಿಂಗಡಿಸಿ ಪಂಚಾಯಿತಿಯ ಸ್ವಚ್ಛತಾ ವಾಹನಗಳಿಗೆ ನೀಡಬೇಕೆಂದು ಸೂಚಿಸಿದ್ದಾರೆ. ತ್ಯಾಜ್ಯವನ್ನು ವಿಂಗಡಿಸದೆ ನಿರ್ಲಕ್ಷ್ಯ ವಹಿಸಿದರೆ ಕಾನೂನು ಕ್ರಮ ಹಾಗೂ ದಂಡ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಯೊಬ್ಬರೂ ಹಸಿ ಕಸ, ಒಣ ಕಸ, ಸ್ಯಾನಿಟರಿ ಕಸ ಹಾಗೂ ವಿಶೇಷ ಕಾಳಜಿಯ ತ್ಯಾಜ್ಯ ಎಂದು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಹಸಿ ಕಸದ ವಿಭಾಗದಲ್ಲಿ ಅಡುಗೆ ಮನೆಯ ತ್ಯಾಜ್ಯ, ತರಕಾರಿ, ಹಣ್ಣುಗಳ ಸಿಪ್ಪೆ ಹಾಗೂ ಬೇಗ ಕೊಳೆಯುವ ವಸ್ತುಗಳನ್ನು ಹಾಕಬೇಕು. ಒಣ ಕಸದಲ್ಲಿ ಪ್ಲಾಸ್ಟಿಕ್, ಕಾಗದ, ಗಾಜು ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸಬೇಕು. ಸ್ಯಾನಿಟರಿ ತ್ಯಾಜ್ಯದ ವಿಭಾಗದಲ್ಲಿ ಬಳಸಿದ ಡೈಪರ್, ಸ್ಯಾನಿಟರಿ ಪ್ಯಾಡ್ಗಳನ್ನು ಪ್ರತ್ಯೇಕವಾಗಿ ಮುಚ್ಚಿ ಸಂಗ್ರಹಿಸಿ. ಇಲೆಕ್ಟ್ರಾನಿಕ್ ತ್ಯಾಜ್ಯ, ಹಳೆಯ ಬ್ಯಾಟರಿಗಳು, ಔಷಧೀಯ ಬಾಟಲಿಗಳು ಮತ್ತು ಲೈಟ್ಗಳಂತಹ ಅಪಾಯಕಾರಿ ವಸ್ತುಗಳನ್ನು ವಿಶೇಷ ಕಾಳಜಿಯ ತ್ಯಾಜ್ಯ ಎಂದು ಪರಿಗಣಿಸಿ ನಾಲ್ಕನೇ ಬುಟ್ಟಿಯಲ್ಲಿ ವಿಂಗಡಿಸಬೇಕೆಂದು ತಿಳಿಸಿದರು.

ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಪಂಚಾಯಿತಿಯ ಪ್ರತಿ ವಾರ್ಡ್ಗೆ ಆರೋಗ್ಯ ನಿರೀಕ್ಷಕರನ್ನು ವಿಶೇಷ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳು ಮತ್ತು ಪೌರಕಾರ್ಮಿಕರ ಜಂಟಿ ತಂಡವು ಪ್ರತಿದಿನ ಬೆಳಗ್ಗೆ ಪ್ರತಿ ಮನೆ-ಮನೆಗೆ ತೆರಳಿ ಘನತ್ಯಾಜ್ಯ ನಿಯಮಗಳ ಕುರಿತು ಸ್ಟಿಕ್ಕರ್ ಹಾಗೂ ಕರಪತ್ರ ವಿತರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ ಎಂದರು.

ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಸುರಿಯುವ ‘ಬ್ಲಾಕ್ ಸ್ಪಾಟ್’ ಗಳನ್ನು ಗುರುತಿಸಿ ಅವುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಮತ್ತು ಮುಂಬರುವ ದಿನಗಳಲ್ಲಿ ಕಸ ಮರುಕಳಿಸದಂತೆ ಸಿಸಿಟಿವಿ ಕಣ್ಗಾವಲು ಸೇರಿದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಹಸಿ ಕಸವನ್ನು ಜೈವಿಕ ಗೊಬ್ಬರವಾಗಿ, ಒಣ ಕಸವನ್ನು ಮರುಬಳಕೆ ಮಾಡಬಹುದಾದ ಮತ್ತು ಮಾಡಲಾಗದ ವಸ್ತುಗಳಾಗಿ ಮರು ವಿಂಗಡಿಸಿ, ಸ್ಥಳೀಯ ಮರುಸಂಸ್ಕರಣಾ ಕೈಗಾರಿಕೆಗಳಿಗೆ ರವಾನಿಸಲಾಗುವುದು

ಪಟ್ಟಣದಲ್ಲಿ ಕೈಗಾರಿಕೆಗಳು, ಕಲ್ಯಾಣ ಮಂಟಪಗಳು ಮತ್ತು ಅಪಾರ್ಟ್ಮೆಂಟ್ಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರನ್ನು ಗುರುತಿಸಲಾಗಿದೆ. ಅವರು ತ್ಯಾಜ್ಯವನ್ನು ತಮ್ಮದೇ ಆವರಣದಲ್ಲಿ ಸಂಸ್ಕರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಅಲ್ಲಿ ಸಂಸ್ಕರಣಾ ಸೌಲಭ್ಯವಿಲ್ಲದಿದ್ದರೆ ಪಂಚಾಯಿತಿಯ ನಿಯಮಾವಳಿ ಪ್ರಕಾರ ನಿಗದಿತ ಶುಲ್ಕ ಪಾವತಿಸಿ ಕಸ ನೀಡಬೇಕಾಗುತ್ತದೆ ಎಂದರು.

ನಾಗರಿಕರು ಬಳಸಿದ ಹಳೆಯ ಬಟ್ಟೆ, ಪುಸ್ತಕ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ದಾನ ಮಾಡಲು ಆಯ್ದ ವಾರ್ಡ್ಗಳಲ್ಲಿ ಆರ್ಆರ್ಆರ್ ಘಟಕಗಳನ್ನು ತೆರೆಯಲಾಗಿದೆ ಎಂದರು.

ಪಟ್ಟಣದ ಸ್ವಚ್ಛತೆಗಾಗಿ ಸಾರ್ವಜನಿಕರು ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-18-119798949

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.