ವೇಮಗಲ್: ವೇಮಗಲ್ ಮತ್ತು ನರಸಾಪುರ ಹೋಬಳಿಯಾದ್ಯಂತ ಕಳೆದ ಎರಡು ವಾರಗಳಿಂದ ಸುರಿದ ಮಳೆಯಿಂದ ರೈತನ ಮುಖದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳತ್ತ ಮುಖಮಾಡಿದ್ದಾರೆ.

ಬಿಸಿಲಿನ ಬೇಗೆಯಿಂದ ಬೆಂದಿದ್ದ ರೈತರಿಗೆ ಇತ್ತೀಚೆಗೆ ಸುರಿದ ಮಳೆ ಭೂಮಿಯನ್ನು ತಂಪಾಗಿಸಿದ್ದು, ಮುಂಗಾರಿನ ಸಿದ್ಧತೆಗೆ ರೈತರು ಮುಂದಾಗಿದ್ದಾರೆ.

ಪೂರ್ವ ಮುಂಗಾರಿನಲ್ಲಿ ಭೂಮಿ ಸಿದ್ಧಪಡಿಸುವಿಕೆಅತ್ಯಂತ ಮುಖ್ಯ. ಹಾಗಾಗಿ ರೈತರು ಮಣ್ಣನ್ನು ಹದಗೊಳಿಸಲು ಮುಂದಾಗಿದ್ದಾರೆ. ಉಳುಮೆ ಮಾಡುವುದರಿಂದ ಮಣ್ಣು ಸಡಿಲಗೊಂಡು ಕೆಳಭಾಗದಲ್ಲಿರುವ ಸಮೃದ್ಧವಾದ ಪೋಷಕಾಂಶಗಳು ಮಣ್ಣು ಮೇಲ್ಪದರಕ್ಕೆ ಬರುತ್ತದೆ. ಮಣ್ಣು ಸೂರ್ಯನ ಕಿರಣಗಳ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಹೆಚ್ಚು ಫಲವತ್ತತೆ ಪಡೆಯುತ್ತದೆ.

ತಾಲ್ಲೂಕಿನ ಕ್ಯಾಲನೂರು, ಸೀತಿ, ತಿಪ್ಪೇನಹಳ್ಳಿ, ಅಮ್ಮನಲ್ಲೂರು, ಚಲ್ದಿಗಾನಹಳ್ಳಿ, ಪುರಹಳ್ಳಿ, ರಾಜಕಲ್ಲಹಳ್ಳಿ, ಚೌಡದೇನಹಳ್ಳಿ, ಕಲ್ವಮಂಜಲಿ, ನರಸಾಪುರ ಸೇರಿದಂತೆ ಬೆಳಮಾರನಹಳ್ಳಿ, ದಾನಹಳ್ಳಿ, ಭುವನಹಳ್ಳಿ ಹಾಗೂ ಕುರುಗಲ್ ಭಾಗಗಳಲ್ಲಿ ಸತತ ನಾಲ್ಕೈದು ದಿನಗಳಿಂದ ಮಳೆ ಸುರಿದಿದ್ದು, ರೈತರು ಅತ್ಯಂತ ಉತ್ಸಾಹದಿಂದ ಬಿತ್ತನೆಗೆ ಭೂಮಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಹೋಬಳಿಯಾದ್ಯಂತ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಕೃಷಿ ಭೂಮಿ ಹದಗೊಳಿಸಲು ಟ್ರ್ಯಾಕ್ಟರ್ಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಸಣ್ಣ ಮತ್ತು ದೊಡ್ಡ ಹಿಡುವಳಿದಾರರು ಟ್ರ್ಯಾಕ್ಟರ್ ಗಳ ಮೊರೆ ಹೋಗುತ್ತಿದ್ದು, ಹಳ್ಳಿಗಳ ಹೊಲಗಳಲ್ಲಿ ಈಗ ಟ್ರ್ಯಾಕ್ಟರ್ಗಳದ್ದೇ ಸದ್ದಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಕೆಲಸವಿಲ್ಲದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ಕೃಷಿ ಯಂತ್ರೋಪಕರಣಗಳ ಮಾಲೀಕರಿಗೆ ಈಗ ಬಿಡುವಿಲ್ಲದಂತಾಗಿದೆ.

ವೇಮಗಲ್ ಹೋಬಳಿಯ ರೈತರು ಮುಂಗಾರು ಪೂರ್ವ ಬಿತ್ತನೆಗಾಗಿ ಭೂಮಿಯನ್ನು ಸಜ್ಜುಗೊಳಿಸುತ್ತಿದ್ದು, ಪ್ರಮುಖವಾಗಿ ತೊಗರಿ ಮತ್ತು ಅಲಸಂದೆ ಬೆಳೆಗಳ ಬಿತ್ತನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಜೂನ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಭೂಮಿಯ ತೇವಾಂಶಕ್ಕೆ ಅನುಗುಣವಾಗಿ ತೊಗರಿ ಬಿತ್ತನೆಗೆ ಸೂಕ್ತ ಕಾಲ. ತೇವಾಂಶ ಇರುವ ಭೂಮಿಯನ್ನು ಬಿತ್ತನೆಗೆ ಸಿದ್ಧಮಾಡಿಟ್ಟು ಕೊಂಡು ತೊಗರಿ ಬಿತ್ತನೆ ಮಾಡಬಹುದು.

-ಶ್ರೀಧರ್, ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ವೇಮಗಲ್

ಬಿತ್ತನೆಗೆ ಭೂಮಿ ಸಜ್ಜು

ಕಳೆದ ಎರಡು ತಿಂಗಳಿಂದ ಬಿಸಿಲಿನ ಬೇಗೆಯಿಂದ ಭೂಮಿ ಒಣಗಿ ಬಿರುಕು ಬಿಟ್ಟಿತ್ತು. ಆದರೆ, ಮೇ ಆರಂಭದಿಂದಲೇ ಆಗಾಗ ಸುರಿದ ಮಳೆಯಿಂದ ಮಣ್ಣಿನಲ್ಲಿ ಉತ್ತಮ ತೇವಾಂಶವಿದೆ. ಹಾಗಾಗಿ ತೊಗರಿ ಮತ್ತು ಅಲಸಂದೆ ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಇದೇ ರೀತಿ ಮಳೆಯಾದರೆ ಉತ್ತಮ ಫಸಲು ಪಡೆಯಬಹುದು.

-ಭೈರಪ್ಪ, ರೈತರು, ವೇಮಗಲ್

ಮಳೆ ತಂಪಾದ ಇಳೆ

ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ವೇಮಗಲ್ ಮತ್ತು ನರಸಾಪುರ ಹೋಬಳಿಗಳ ಸುತ್ತಮುತ್ತಲ ಹಳ್ಳಿಗಳಲ್ಲಿ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

ಸತತ ಎರಡು ಗಂಟೆಗಳಿಗೂ ಹೆಚ್ಚು ಕಾಲ ಬಿಡುವಿಲ್ಲದೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಿತು. ಮಳೆ ನೀರಿನಿಂದ ರಸ್ತೆಗಳು ಆವರಿಸಿದವು. ಮಣ್ಣಿನ ತೇವಾಂಶ ಹೆಚ್ಚಾಗಿ, ಉಳುಮೆಗೆ ಸಹಕಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.