ವೇಮಗಲ್: ಪಟ್ಟಣದ ಐತಿಹಾಸಿಕ ದ್ರೌಪದಮ್ಮ ಧರ್ಮರಾಯಸ್ವಾಮಿ ದೇವಾಲಯದ 51ನೇ ವರ್ಷದ ಕರಗ ಮಹೋತ್ಸವ ಮೂರು ದಿನ ಅತ್ಯಂತ ವೈಭವ ಮತ್ತು ಭಕ್ತಿಭಾವದಿಂದ ನೆರವೇರಿತು. ಭಾನುವಾರ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಒನಕೆ ಕರಗದ ವಸಂತೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಕರಗದ ಪೂಜಾರಿ ವೇಮಗಲ್ ಜಗದೀಶ್ ಸ್ವಾಮಿ, ಆರು ಅಡಿ ಉದ್ದದ ಒನಕೆ ಮೇಲೆ ಅರಿಸಿನ ನೀರು ತುಂಬಿದ ತಾಮ್ರದ ಪಾತ್ರೆಯನ್ನಿಟ್ಟುಕೊಂಡು, ತಮಟೆ ವಾದನಕ್ಕೆ ತಕ್ಕಂತೆ ಲಯಬದ್ಧವಾಗಿ ನೃತ್ಯ ಮಾಡಿದರು. ಗೆಜ್ಜೆಯ ಕಾಲಿನ ತಾಳದೊಂದಿಗೆ ಎರಡೂ ಕೈಗಳನ್ನು ಬಿಟ್ಟು ಸಮತೋಲನ ಕಳೆದುಕೊಳ್ಳದೆ ಪ್ರದರ್ಶಿಸಿದ ನೃತ್ಯವು ನೋಡುಗರಲ್ಲಿ ವಿಸ್ಮಯ ಮೂಡಿಸಿತು.

ಈ ಅಪರೂಪದ ಪ್ರದರ್ಶನಕ್ಕಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆಗಳಿಂದ ನೆರೆದಿದ್ದ ಯುವಕ-ಯುವತಿಯರು, ಮಹಿಳೆಯರು ಕಣ್ತುಂಬಿಕೊಂಡು ಮೊಬೈಲ್ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದರು. ನೃತ್ಯದ ಬಳಿಕ ವೀರಕುಮಾರರು ಪರಸ್ಪರ ನೀರೆರಚಿಕೊಂಡು ‘ಓಕುಳಿಯಾಟ’ ಆಡಿದರು.

ಶನಿವಾರ ರಾತ್ರಿ ಭರತ ಪಠಣ ಪೂಜಾರಿ ನಾರಾಯಣಸ್ವಾಮಿ ಅವರು ಶುರು ಮಾಡಿದ ದ್ರೌಪದಮ್ಮ ದೇವಿ ಕಥೆ, ಭಾನುವಾರ ಬೆಳಗ್ಗೆ ಪೋತಲರಾಜು ಸೀನಪ್ಪ ಅವರಿಂದ ಗಾವು ಹಿಡಿಯುವ ಕಾರ್ಯಕ್ರಮ ಮತ್ತು ಮಹಾಮಂಗಳಾರತಿಯೊಂದಿಗೆ ಮುಕ್ತಾಯಗೊಂಡಿತು. ಕಡೆ ದಿನದಂದು ಧರ್ಮರಾಯಸ್ವಾಮಿಗೆ ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ 51ನೇ ಕರಗ ಮಹೋತ್ಸವಕ್ಕೆ ತೆರೆ ಬಿದ್ದಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-18-309396346

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.