ಸರಗಳ್ಳರನ್ನು ಬೆನ್ನಟ್ಟಿ ಹಿಡಿದ ಗ್ರಾಮಸ್ಥರು

7

ಸರಗಳ್ಳರನ್ನು ಬೆನ್ನಟ್ಟಿ ಹಿಡಿದ ಗ್ರಾಮಸ್ಥರು

Published:
Updated:
Deccan Herald

ಕೋಲಾರ: ತಾಲ್ಲೂಕಿನ ಕಲ್ವಮಂಜಲಿ ಗ್ರಾಮದ ಬಳಿ ಬುಧವಾರ ವಿಳಾಸ ಕೇಳುವ ಸೋಗಿನಲ್ಲಿ ಮಹಿಳೆಯ ಚಿನ್ನದ ಸರ ದೋಚಿ ಬೈಕ್‌ನಲ್ಲಿ ಪರಾರಿಯಾಗುತ್ತಿದ್ದ ಸರಗಳ್ಳರನ್ನು ಗ್ರಾಮಸ್ಥರು ಬೆನ್ನಟ್ಟಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಮಲ್ಲೇನಹಳ್ಳಿ ಗ್ರಾಮದ ಆನಂದ್‌ ಮತ್ತು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವೀರೇಂದ್ರ ಸಿಕ್ಕಿಬಿದ್ದ ಸರಗಳ್ಳರು. ಬೈಕ್‌ನಲ್ಲಿ ಬಂದಿದ್ದ ಇವರು ಗ್ರಾಮದ ಹೊರವಲಯದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಾಲಮ್ಮ ಎಂಬುವರನ್ನು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿದ್ದಾರೆ.

ನಂತರ ಅವರ ಬಳಿ ಹೋಗಿ ಮಾಂಗಲ್ಯದ ಸರ ಕಿತ್ತುಕೊಂಡು ಪರಾರಿಯಾಗಲೆತ್ನಿಸಿದ್ದಾರೆ. ಆಗ ಮಾಲಮ್ಮ ಚೀರಾಡಿದ್ದಾರೆ. ಅಕ್ಕಪಕ್ಕದ ಜಮೀನುಗಳಲ್ಲಿದ್ದ ಗ್ರಾಮಸ್ಥರು ಮಹಿಳೆಯ ಚೀರಾಟ ಕೇಳಿ ಸರಗಳ್ಳರನ್ನು ಬೈಕ್‌ಗಳಲ್ಲಿ ಸುಮಾರು ಎರಡು ಕಿ.ಮೀ ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಸರಗಳ್ಳರ ಬಟ್ಟೆ ಹರಿದು ಹಿಗ್ಗಾಮುಗ್ಗಾ ಥಳಿಸಿ ವೇಮಗಲ್‌ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಸ್ನೇಹಿತರಾದ ಈ ಇಬ್ಬರು ಬೆಂಗಳೂರಿನ ಕೂಡ್ಲುಗೇಟ್‌ನಲ್ಲಿ ವಾಸವಾಗಿದ್ದರು. ಟ್ರಾವೆಲ್ಸ್‌ ಕಂಪನಿಯಲ್ಲಿ ಚಾಲಕರಾಗಿದ್ದ ಇವರು ಬಡ್ಡಿ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸುವ ಉದ್ದೇಶಕ್ಕಾಗಿ ಸರ ಕಳವು ಮಾಡಲೆತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !