ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | 17 ವರ್ಷದ ನಂತರ ಭರ್ತಿ; ನಂಗಲಿ ಕೆರೆ ಕೋಡಿಯಲ್ಲಿ ನೀರು ಸೋರಿಕೆ

Last Updated 13 ಜನವರಿ 2022, 6:00 IST
ಅಕ್ಷರ ಗಾತ್ರ

ನಂಗಲಿ: ನಂಗಲಿ ಕೆರೆ ಕೋಡಿಯಲ್ಲಿ ನೀರು ಸೋರಿಕೆಯಾಗುತ್ತಿದೆ.

ತಾಲ್ಲೂಕಿನ ದೊಡ್ಡ ಕೆರೆಯಾದ ನಂಗಲಿ ಕೆರೆ ತುಂಬಿ ಹದಿನೇಳು ವರ್ಷಗಳೇ ಕಳೆದಿತ್ತು. ಈಚೆಗೆ ಬಿದ್ದ ಮಳೆಗೆ ಕೆರೆ ಕೋಡಿ ಹೋಗುತ್ತಿದೆ. ಆದರೆ, ಕೋಡಿಯ ಕಟ್ಟೆ ಕೆಳಗೆ ನಾಲ್ಕೈದು ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಇದನ್ನು ತಡೆಯಲು ಅಧಿಕಾರಿಗಳು ಮುಂದಾಗಿಲ್ಲ ಎಂಬುದು ರೈತರ ದೂರು.

ಬರಗಾಲದ ಕಾರಣದಿಂದ ಕೆರೆಯಲ್ಲಿ ನೀರು ಇಂಗಿ ಅಂತರ್ಜಲ ಹೆಚ್ಚುವ ಕಾರಣಕ್ಕೆ ನೀರನ್ನು ಯಾರೂ ಬಳಸದಂತೆ ಈಚೆಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ, ಕೋಡಿಯ ಕೆಳ ಭಾಗದ ಕಲ್ಲಿನ ಕಟ್ಟೆಯ ಕೆಳಗೆ ನೀರು ಸೋರಿಕೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೋಡಿ ದುರಸ್ತಿಗೆ ಮುಂದಾಗಬೇಕು ಎಂದು ಗ್ರಾಮಸ್ಥ ಕಿಶೋರ್ ಒತ್ತಾಯಿಸಿದರು.

ಬರಗಾಲದ ಕಾರಣದಿಂದ ಮಳೆ ಇಲ್ಲದೆ ಕೆರೆ ತನ್ನ ಮೂಲ ರೂಪವನ್ನೇ ಕಳೆದುಕೊಂಡಿತ್ತು. ಕೆರೆ ದುರಸ್ತಿ ಆಗದ ಕಾರಣದಿಂದ ಕೆರಸಿಮಂಗಲ ಕಡೆಯ ತೂಬಿನಲ್ಲಿ ಈಚೆಗೆ ಭಾರೀ ಪ್ರಮಾಣದಲ್ಲಿ ನೀರು ಪೋಲಾಗಿತ್ತು. ಕಟ್ಟೆಯ ಕೆಲವು ಕಡೆಗಳಲ್ಲಿ ಗುಂಡಿಗಳು ಬಿದ್ದಿದ್ದವು. ಈಗ ಕೋಡಿಯ ಗೋಡೆಯಲ್ಲಿ ಸೋರುತ್ತಿರುವುದರಿಂದ ನೀರು ವ್ಯರ್ಥವಾಗುವುದನ್ನು ತಪ್ಪಿಸಿ ಕೆರೆ ಮತ್ತು ನೀರನ್ನು ಸಂರಕ್ಷಣೆ ಮಾಡಬೇಕಾಗಿದೆ.

‘ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ತಿಳಿಸಿ ಕೋಡಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉಪ ತಹಶೀಲ್ದಾರ್ ಕೆ.ಟಿ. ವೆಂಕಟೇಶಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT