ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಶೃಂಗ ಬೆಟ್ಟದ ನಡುವೆ ಯೋಗ: ಸ್ಥಳ ಪರಿಶೀಲಿಸಿದ ಸಂಸದ ಮುನಿಸ್ವಾಮಿ

Last Updated 3 ಜೂನ್ 2022, 5:14 IST
ಅಕ್ಷರ ಗಾತ್ರ

ಕೋಲಾರ: ಶತಶೃಂಗ ಪರ್ವತ ಶ್ರೇಣಿಯ ಸುಂದರ ಹಾಗೂ ಸ್ವಚ್ಛಂದ ಪ್ರಕೃತಿ ನಡುವೆಜೂನ್‌ 21ರಂದು ವಿಶ್ವ ಯೋಗ ದಿನ ಆಚರಿಸಲು ಸಿದ್ಧತೆ ನಡೆಸಿದ್ದು, 20 ಸಾವಿರ ಯೋಗಾಸಕ್ತರನ್ನು ಸೇರಿಸುವಗುರಿಹೊಂದಲಾಗಿದೆ.

ಈ ಸಂಬಂಧ ಸಂಸದ ಎಸ್‌. ಮುನಿಸ್ವಾಮಿ, ಯೋಗ ಗುರುಗಳು, ಅಧಿಕಾರಿಗಳು ಹಾಗೂ ಸಂಘ– ಸಂಸ್ಥೆಗಳ ಪ್ರತಿನಿಧಿಗಳು ಗುರುವಾರ ಪರ್ವತ ಶ್ರೇಣಿಯ ತೇರಹಳ್ಳಿ ಬೆಟ್ಟಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ಸುತ್ತಲೂ ಬೆಟ್ಟವಿದ್ದು, ನಡುವೆ ಸುಮಾರು 30 ಎಕರೆ ಜಾಗವಿದ್ದು, ಇಲ್ಲಿಯೇ ಅಂದು ಯೋಗ ಪ‍್ರದರ್ಶಿಸಲು ಸಮಾಲೋಚನೆ ನಡೆಸಿದರು.

‘ಉತ್ತಮ ಪರಿಸರದ ನಡುವೆ ಯೋಗ ಪ್ರದರ್ಶಿಸಲು ಸಿದ್ಧತೆ ನಡೆ ಯುತ್ತಿದ್ದು,ಯೋಗ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ. 21ರಂದು ಎಲ್ಲಾ ಯೋಗಪಟುಗಳು ಹಾಗೂ ಯೋಗಾಸಕ್ತರು ಇಲ್ಲಿಗೆ ಬರ ಬೇಕು’ ಎಂದು ಮನವಿ ಮಾಡಿದರು

‘ಯೋಗ ಮಾರ್ಗ ದರ್ಶಕರು,ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಸಂಘ– ಸಂಸ್ಥೆ ಪ್ರತಿನಿಧಿ ಗಳು, ಯೋಗಾಸಕ್ತರು ಪಾಲ್ಗೊಳ್ಳಲ ದ್ದಾರೆ. ಈಗಾಗಲೇ, ನಗರದ ಕ್ರೀಡಾಂಗಣದಲ್ಲಿ ತಾಲೀಮು ನಡೆಸಿದ್ದು, 4 ಸಾವಿರ ಶಿಕ್ಷಕರು, ವಿದ್ಯಾರ್ಥಿಗಳು ಆ ಸಂದರ್ಭದಲ್ಲಿ ಭಾಗಿಯಾಗಿದ್ದರು’ ಎಂದರು.

‘ಉಳಿದ ಕಡೆಗಿಂತ ಶತಶೃಂಗ ಪ್ರದೇಶದ ಈ ವಾತಾವರಣದಲ್ಲಿ ಯೋಗ ಪ್ರದರ್ಶಿಸುವುದು ಉತ್ತಮ ಎಂದು ನಾನು ಭಾವಿಸಿದ್ದೇನೆ. ಒತ್ತಡದಿಂದ ಮುಕ್ತವಾಗಲು, ನೆಮ್ಮದಿ ಕಾಣಲು ಸಾಧ್ಯ. ಹೀಗಾಗಿ, ಪ್ರಕೃತಿ ನಡುವೆ ಯೋಗ ಮಾಡಲು ನಿರ್ಧರಿಸಲಾಗಿದೆ. ಯೋಗಪಟುಗಳು ಕೂಡ ಈ ಜಾಗ ಯೋಗ್ಯವೆಂದು ಶಿಫಾರಸು ಮಾಡಿದ್ದಾರೆ. ಈ ಮೂಲಕ ಈ ಜಾಗ ಎಲ್ಲರಿಗೂ ಮತ್ತಷ್ಟು ಪರಿಚಿತವಾಗಲಿದೆ. ಹೊರ ಜಗತ್ತಿಗೂ ಗೊತ್ತಾಗಲಿದೆ. ಇಲ್ಲಿ ರಾಜರ ಕೋಟೆ, ದೇಗುಲ ಇವೆ. ಉತ್ತಮ ಪ್ರವಾಸಿ ತಾಣ ಕೂಡ’ ಎಂದು ಹೇಳಿದರು.

ಯೋಗಪ್ರದರ್ಶನ ಯಶಸ್ವಿ ಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳು ವಂತೆ ಹಾಗೂತಾಲೀಮು ಕೈಗೊಳ್ಳು ವಂತೆ ಸೂಚನೆ ನೀಡಿದರು.

ಇನ್‌ಸ್ಪೆಕ್ಟರ್‌ ರಮೇಶ್‌, ಯೋಗ ಮಾರ್ಗದರ್ಶಕರು, ಆರೋಗ್ಯ ಹಾಗೂ ಆಯುಷ್‌ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT