ದ್ಯಾಮಮ್ಮ ದೇವಿ ಜಾತ್ರೆ ಏ.26ರಿಂದ

ಸೋಮವಾರ, ಮಾರ್ಚ್ 25, 2019
26 °C

ದ್ಯಾಮಮ್ಮ ದೇವಿ ಜಾತ್ರೆ ಏ.26ರಿಂದ

Published:
Updated:
Prajavani

ಯಲಬುರ್ಗಾ: ಪಟ್ಟಣದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆ ದ್ಯಾಮಮ್ಮ ದೇವಿಯ ಜಾತ್ರೋತ್ಸವವನ್ನು ಏ.26ರಿಂದ 5 ದಿನಗಳ ಕಾಲ ನಡೆಸಲು ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಅಂದಾನಗೌಡ ಉಳ್ಳಾಗಡ್ಡಿ ಮಾತನಾಡಿ,  ದೇವಿ ಜಾತ್ರೆಗೆ ಏ.26ರಂದು ಚಾಲನೆ ನೀಡಲಾಗುವುದು. ಮೇ 1ರಂದು ಹಾಲೆರೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

‘ದೇವಿ ಉತ್ಸವ ಪಟ್ಟಣದಲ್ಲಿ ವಿವಿಧ ವಾರ್ಡ್ ಹಾಗೂ ಓಣಿಗಳಲ್ಲಿ ಸಂಚರಿಸಲಿದೆ. ದುರ್ಗಾದೇವಿ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಮೇಟಿಯವರ ಓಣಿ, ಗಂಧದವರ ಮನೆ ಹತ್ತಿರ, ದ್ಯಾಮಮ್ಮನ ಗುಡಿಯ ಕಟ್ಟೆಯ ಹತ್ತಿರ ದೇವಿಯ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ವಾಸ್ತವ್ಯ ಹೂಡುವ ವಾರ್ಡ್ ಹಾಗೂ ಓಣಿಯ ಜನರು ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಆಯೋಜಿಸಲಿದ್ದಾರೆ’ ಎಂದು ಹೇಳಿದರು.

ಮುಖಂಡರಾದ ವೀರನಗೌಡ ಭರಮಗೌಡ್ರ, ಅಮರಪ್ಪ ಕಲಬುರ್ಗಿ, ಟಿ.ಎಸ್.ಮಲ್ಲಿಕಾರ್ಜುನ, ಬಸಪ್ಪ ಕಮ್ಮಾರ, ಅಂದಯ್ಯ ಕಳ್ಳಿಮಠ, ಮಲ್ಲೇಶಗೌಡ ಮಾಲಿಪಾಟೀಲ್, ವೀರನಗೌಡ ಬನ್ನಪ್ಪಗೌಡ್ರ, ವೀರಣ್ಣ ಹುಬ್ಬಳ್ಳಿ, ಸಂಗಣ್ಣ ಟೇಂಗಿನಕಾಯಿ, ಅಶೋಕ ಅರಕೇರಿ, ಶರಣಗೌಡ ಕೊಡಗಲಿ, ಹನುಮಂತಪ್ಪ ದಾನಕೈ, ಸಿದ್ಧರಾಮೇಶ ಬೇಲೇರಿ, ಬಸಲಿಂಗಪ್ಪ ಕೊತ್ತಲ, ವಿರುಪಾಕ್ಷಯ್ಯ ಗಂಧದ, ಈರಪ್ಪ ಚಾಕ್ರಿ, ಅಯ್ಯನಗೌಡ ಶೀಲವಂತರ, ರೇವಣೆಪ್ಪ ಹಿರೇಕುರಬರ, ಶಿವಪ್ಪ ಹಡಪದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !