ಶನಿವಾರ, ಫೆಬ್ರವರಿ 29, 2020
19 °C

ಅಂಜನಾದ್ರಿ ಹುಂಡಿಯಲ್ಲಿ 16 ದೇಶದ ನಾಣ್ಯ, ₹10.53 ಲಕ್ಷ ನಗದು ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಸಮೀಪದ ಚಿಕ್ಕರಾಂಪುರದಲ್ಲಿರುವ ಐತಿಹಾಸಿಕ ಅಂಜನಾದ್ರಿ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣವನ್ನು ಶುಕ್ರವಾರ ಎಣಿಕೆ ಮಾಡಲಾಯಿತು.

ಹುಂಡಿಯಲ್ಲಿ ₹10.53 ಲಕ್ಷ  ನಗದು ಸಂಗ್ರಹವಾಗಿದೆ. ಅಲ್ಲದೆ, ನೇಪಾಳ, ಬಾಂಗ್ಲಾದೇಶ ಸೇರಿದಂತೆ 16 ದೇಶಗಳ ವಿವಿಧ ನಾಣ್ಯಗಳು, ನೋಟುಗಳು ಸಂಗ್ರಹವಾಗಿದ್ದೂ ವಿಶೇಷ.

ಹುಂಡಿಯಲ್ಲಿ ಕೆಲವು ಪತ್ರಗಳು ದೊರೆತಿದ್ದು, ಇಷ್ಟಾರ್ಥ ನೆರವೇರಿಸುವಂತೆ ಭಕ್ತರು ದೇವರಲ್ಲಿ ಅರಿಕೆ ಮಾಡಿಕೊಂಡಿದ್ದಾರೆ. ನೌಕರಿ, ಉದ್ಯೋಗ, ಮದುವೆ, ಮಕ್ಕಳು ಸೇರಿ  ವಿವಿಧ ಕೋರಿಕೆ ಪತ್ರಗಳು ಇದ್ದವು.

 ಹನುಮ ಮಾಲಾಧಾರಿ ವ್ರತಾಧಾರಿಗಳು ಸೇರಿ  ಪ್ರತಿದಿನ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಸೂರ್ಯಾಸ್ತದ ದೃಶ್ಯ ವೀಕ್ಷಣೆಗೆ ಸಾಕಷ್ಟು ವಿದೇಶಿಗರು ಇಲ್ಲಿ ನೆರೆದಿರುತ್ತಾರೆ. ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬಂದ ನಂತರ ₹1.50 ಕೋಟಿ ಹಣ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ ತಿಳಿಸಿದರು.

ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹಣ ಎಣಿಕೆ ಕಾರ್ಯ ನಡೆಯಿತು. ತಹಶೀಲ್ದಾರ್‌ ಎಲ್.ಡಿ.ಚಂದ್ರಕಾಂತ್, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು