ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ: ವಾಹನ ತಪಾಸಣೆ ವೇಳೆ ₹ 17 ಲಕ್ಷ ನಗದು ಪತ್ತೆ

ಅಳವಂಡಿ: ಆರು ಜನ ದ್ವಿಚಕ್ರ ವಾಹನ ಸವಾರರು ಪರಾರಿ
Last Updated 5 ಆಗಸ್ಟ್ 2021, 13:00 IST
ಅಕ್ಷರ ಗಾತ್ರ

ಅಳವಂಡಿ: ವಾಹನಗಳ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದ ಪೊಲೀಸರನ್ನು ಕಂಡು ದ್ವಿಚಕ್ರ ವಾಹನದ ಮೇಲೆ ಬಂದಿದ್ದ ವ್ಯಕ್ತಿಗಳು ಪರಾರಿಯಾದ ಘಟನೆ ನಡೆದಿದೆ.

ಅಳವಂಡಿ ಠಾಣಾ ವ್ಯಾಪ್ತಿಯಲ್ಲಿ ವಾಹನಗಳ ತಪಾಸಣೆ ನಡೆದಿತ್ತು. ಈ ಸಂದರ್ಭದಲ್ಲಿ 3 ಬೈಕ್‌ನಲ್ಲಿ ಬಂದಿದ್ದ ಆರು ಜನರು ಪೊಲೀಸರು ಕಂಡ ತಕ್ಷಣ ಎರಡು ಬೈಕ್‌ನಲ್ಲಿದವರು ಮುಂಡರಗಿಯತ್ತ ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಇನ್ನೊಂದು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ವಾಹನ ಬಿಟ್ಟು ಕಬ್ಬಿನ ಗದ್ದೆಯತ್ತ ಓಡಿ ಹೋಗಿದ್ದಾರೆ.

ಅನುಮಾನಗೊಂಡ ಪೊಲೀಸರು ಅಳವಂಡಿ ಸುತ್ತಮುತ್ತಲಿನ ಹೊಲಗಳಲ್ಲಿ ತೀವ್ರ ಶೋಧ ನಡೆಸಿದ್ದಾರೆ. ಆದರೂ ಅವರು ಪತ್ತೆಯಾಗಲಿಲ್ಲ. ಬೈಕ್ ಪರಿಶೀಲಿಸಿದಾಗ ₹ 17 ಲಕ್ಷ ನಗದು ಹಾಗೂ ಮೊಬೈಲ್‌ ಪತ್ತೆಯಾಗಿದೆ. ಅದನ್ನು ಪೊಲೀಸರು ವಶ ಪಡೆಸಿಕೊಂಡಿದ್ದಾರೆ. ಇದು ಕಳ್ಳರ ತಂಡ ಇರಬಹುದು ಎಂಬ ಶಂಕೆಯಿಂದ ಪೊಲೀಸರು ಶ್ವಾನದಳ ಸಮೇತ ಕಾರ್ಯಚರಣೆ ನಡೆಸಿದ್ದಾರೆ.

ಎಸ್‌ಪಿ ಟಿ.ಶ್ರೀಧರ್‌ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ, ಅವರ ಪತ್ತೆಗಾಗಿ ತೀವ್ರ ಕಾರ್ಯಚರಣೆ ನಡೆಸಿದರು. ಅಳವಂಡಿ-ಕಂಪ್ಲಿ ಭಾಗದ ಹೊಲ ಗದ್ದೆಗಳಲ್ಲಿ ಎಸ್‌ಪಿ ಶ್ರೀಧರ್‌, ಡಿವೈಎಸ್‌ಪಿ ಗೀತಾ ನೇತೃತ್ವದ ಸುಮಾರು ನಾಲ್ಕು ತಂಡಗಳು 150ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಕಾರ್ಯಚರಣೆ ನಡೆಸಿವೆ.

ದರೋಡೆ ಮಾಡಿಕೊಂಡು ಬಂದಿರುವ ಹಣ ಇದಾಗಿರಬಹುದು. ತಪ್ಪಿಸಿಕೊಂಡವರ ಗುರುತು ಪತ್ತೆಯಾಗಿದೆ. ಗದ್ದೆಯ ಬಳಿ ಓಡಿ ಹೋದವರು ಮೈನಳ್ಳಿಯ ಹಳ್ಳ ದಾಟಿಕೊಂಡು ಹೋಗಿರಬಹುದು . ಶೀಘ್ರವೇ ಅವರನ್ನು ಪತ್ತೆಹಚ್ಚಲಾಗುವುದು ಎಂದು ಎಸ್‌ಪಿ ಟಿ.ಶ್ರೀಧರ ಹೇಳಿದ್ದಾರೆ.

ಅಳವಂಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT